"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday, 18 July 2014

★ ಆಹಾರ ಭದ್ರತೆಯ ಕುರಿತಾದ ಸಾರ್ವತ್ರಿಕ ವ್ಯಾಖ್ಯಾನಗಳನ್ನು ಚರ್ಚಿಸಿರಿ. (150 ಶಬ್ಧಗಳಲ್ಲಿ)


★ ಆಹಾರ ಭದ್ರತೆಯ ಕುರಿತಾದ ಸಾರ್ವತ್ರಿಕ ವ್ಯಾಖ್ಯಾನಗಳನ್ನು ಚರ್ಚಿಸಿರಿ.
(150 ಶಬ್ದಗಳಲ್ಲಿ)

ಎಲ್ಲ ಸಮಯದಲ್ಲಿ ಎಲ್ಲಾ ಜನರು ಸಾಕಷ್ಟು ಪ್ರಮಾಣದ ಪೌಷ್ಟಿಕಾಂಶವುಳ್ಳ ಗುಣಾತ್ಮಕ ಪರಿಮಾಣಾತ್ಮಕ ಮತ್ತು ವಿವಿಧ ಮಾದರಿಯ ಆಹಾರ ಧಾನ್ಯಗಳನ್ನು ಪಡೆಯಲು ಪ್ರವೇಶಾಧಿಕಾರವನ್ನು ಕಲ್ಪಿಸುವುದೇ ಆಹಾರ
ಭದ್ರತೆ''. (ಈಂಔ - 1996).

ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ (ಈಂಔ), ವಿಶ್ವ ಅಭಿವೃದ್ಧಿ ವರದಿ (1986) ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನದ ಕೃಷಿ ವಿಭಾಗ (ಗಖಆಂ) ಗಳು ಆಹಾರ ಭದ್ರತೆಗೆ ಈ ಕೆಳಕಂಡ 3 ರೀತಿಯ ಸಾಮಾನ್ಯ ವ್ಯಾಖ್ಯೆಗಳನ್ನು ನೀಡಿವೆ.

* ವಿಶ್ವ ಆಹಾರ ಮತ್ತು ಕೃಷಿ ಸಂಘಟನೆಯ ಪ್ರಕಾರ:
" ಕ್ರಿಯಾಶೀಲ ಮತ್ತು ಆರೋಗ್ಯವಂತ ಜೀವನಕ್ಕಾಗಿ ಹಾಗೂ ಸಮತೋಲನ ಆಹಾರದ ಅವಶ್ಯಕತೆಗೆ ಎಲ್ಲ ಜನರು, ಎಲ್ಲ ಸಮಯದಲ್ಲೂ ಸಾಕಷ್ಟು ಪೌಷ್ಟಿಕಾಂಶದ ಸುರಕ್ಷಿತ ಆಹಾರ ಪಡೆದಾಗ ಆಹಾರ ಭದ್ರತೆ ಇರುತ್ತದೆ"

* ಆಹಾರ ಭದ್ರತೆಯನ್ನು ಒಂದು ಕುಟುಂಬಕ್ಕೆ ಸಂಬಂಧಿಸಿದಂತೆ ಅರ್ಥೈಸುವುದಾದರೆ, ಕ್ರಿಯಾಶೀಲ
ಮತ್ತು ಆರೋಗ್ಯವಂತ ಜೀವನಕ್ಕಾಗಿ ಕುಟುಂಬದ ಎಲ್ಲ ಸದಸ್ಯರು ಎಲ್ಲ ಸಮಯದಲ್ಲೂ ಸಾಕಷ್ಟು ಆಹಾರವನ್ನು ಪಡೆಯಲು ಅರ್ಹವಾಗಿರುವುದು. ಮತ್ತು ಆಹಾರ ಭದ್ರತೆಯು ಕನಿಷ್ಟ ಪೌಷ್ಟಿಕಾಂಶ ಮತ್ತು ಸುರಕ್ಷಿತ ಆಹಾರದ ಲಭ್ಯತೆ ಮತ್ತು ಅದನ್ನು ಕೊಳ್ಳಲು ಆರ್ಥಿಕ ಪ್ರವೇಶಾಧಿಕಾರವನ್ನು ಕಲ್ಪಿಸುವುದು
ಎಂಬ ಎರಡು ಅಂಶಗಳನ್ನು ಒಳಗೊಳ್ಳುತ್ತದೆ.

* ವಿಶ್ವ ಅಭಿವೃದ್ಧಿ ವರದಿ (1986)ಯ ಪ್ರಕಾರ -
" ಕ್ರಿಯಾಶೀಲ ಮತ್ತು ಆರೋಗ್ಯವಂತ ಜೀವನಕ್ಕಾಗಿ  ಎಲ್ಲ ಜನರಿಂದ ಎಲ್ಲ ಸಮಯದಲ್ಲೂ ಸಾಕಷ್ಟು ಆಹಾರವನ್ನು ಪಡೆದುಕೊಳ್ಳಲು ಪ್ರವೇಶಾಧಿಕಾರವನ್ನು ಕಲ್ಪಿಸುವುದು"

ವ್ಯಾಖ್ಯಾನಗಳನ್ನು ಅನುಸರಿಸಿ ಆಹಾರ ಭದ್ರತೆಯನ್ನು ಈ ಮುಂದಿನಂತೆ ತಿಳಿಯಬಹುದು. " ಉತ್ಪಾದಕತೆ ಮತ್ತು ಆರೋಗ್ಯವಂತ ಜೀವನಕ್ಕಾಗಿ ಯಾವಾಗ ಎಲ್ಲ ಜನರು, ಎಲ್ಲ ಸಮಯದಲ್ಲೂ ಭೌತಿಕ ಮತ್ತು ಆರ್ಥಿಕ ಪ್ರವೇಶಾಧಿಕಾರವನ್ನು ಹೊಂದುತ್ತಾರೋ ಅದು ಅವರ ಆಹಾರ ಭದ್ರತೆಯಾಗಿದೆ"

No comments:

Post a Comment