➼ 05 ಏಪ್ರಿಲ್ 2025ರ ದೈನಂದಿನ ಪ್ರಚಲಿತ ವಿದ್ಯಮಾನಗಳು :
(05 April 2025 Current Affairs)
━━━━━━━━━━━━━━━━━━━━━━━━━━━━━━━━━━━━━━━━━━━━━
1.'ಏಪ್ರಿಲ್ 5' — ಗ್ರೆಗೋರಿಯನ್ ಕ್ಯಾಲೆಂಡರ್‌ನ ಪ್ರಕಾರ ವರ್ಷದ 95ನೇ ದಿನವಾಗಿದೆ (ಅಧಿಕ ವರ್ಷ(leap year)ದಲ್ಲಿ 96ನೇ ದಿನ); ವರ್ಷಾಂತ್ಯಕ್ಕೆ 270 ದಿನಗಳು ಉಳಿದಿವೆ.
2.ಏಪ್ರಿಲ್ 5 — ರಾಷ್ಟ್ರೀಯ ಕಡಲ ದಿನ (National Maritime Day).
- 1919 ರಂದು ಮುಂಬೈನಿಂದ ಲಂಡನ್‌ಗೆ ಪ್ರಯಾಣ ಬೆಳೆಸಿದ ಮೊದಲ ಭಾರತೀಯ ಒಡೆತನದ ಉಗಿ ಹಡಗು 'SS ಲಾಯಲ್ಟಿ'(S.S. Loyalty')ಯ ಐತಿಹಾಸಿಕ ಪ್ರಯಾಣವನ್ನು ಸ್ಮರಿಸುತ್ತದೆ.
-ಈ ಮಹತ್ವದ ಘಟನೆಯು ಅಂತರರಾಷ್ಟ್ರೀಯ ಹಡಗು ಸಾಗಣೆಯಲ್ಲಿ ಭಾರತದ ಪ್ರವೇಶವನ್ನು ಗುರುತಿಸಿತು ಮತ್ತು ರಾಷ್ಟ್ರದ ಹೆಮ್ಮೆಯ ಕಡಲ ಪ್ರಯಾಣಕ್ಕೆ ಅಡಿಪಾಯ ಹಾಕಿತು
3.2025 ರ ಆರ್ಥಿಕ ವರ್ಷದಲ್ಲಿ, ಕೇಂದ್ರ ಸರ್ಕಾರವು ಒಟ್ಟು 5,614 ಕಿಮೀ ರಾಷ್ಟ್ರೀಯ ಹೆದ್ದಾರಿಗಳನ್ನು (NH) ನಿರ್ಮಿಸುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ.
4.ಇತ್ತೀಚೆಗೆ, ತೈವಾನ್ ದೇಶದ ಖಗೋಳಶಾಸ್ತ್ರಜ್ಞರು ಶನಿಯ 128 ಹೊಸ ಉಪಗ್ರಹಗಳನ್ನು ಕಂಡುಹಿಡಿದಿದ್ದಾರೆ.
5.ಇತ್ತೀಚೆಗೆ ಎನ್. ಚಂದ್ರಶೇಖರನ್ ಅವರನ್ನು IMF ವ್ಯವಸ್ಥಾಪಕ ನಿರ್ದೇಶಕರ ಉದ್ಯಮಶೀಲತೆ ಮತ್ತು ಅಭಿವೃದ್ಧಿಯ ಸಲಹಾ ಮಂಡಳಿಗೆ ನೇಮಿಸಲಾಗಿದೆ.
6. ಯುರೋಪಿಯನ್ ಅಂತರಿಕ್ಷ ಏಜೆನ್ಸಿಯು 'ಗಯಾ' (Gaia) ಎಂಬ ಹೆಸರಿನ ಬಾಹ್ಯಾಕಾಶ ವೀಕ್ಷಣಾಲಯವನ್ನು ಮುಚ್ಚುವುದಾಗಿ ಘೋಷಿಸಿದೆ.
7.ಇತ್ತೀಚೆಗೆ ಹರಿಯಾಣ ರಾಜ್ಯದಲ್ಲಿ ಮೊದಲ ಬಾರಿಗೆ MNREGA ವೇತನವು ದಿನಕ್ಕೆ ₹400 ಗೆ ತಲುಪಿದೆ.
8. ಪ್ರತಿ ವರ್ಷ ಏಪ್ರಿಲ್ 4 ರಂದು 'ಅಂತರರಾಷ್ಟ್ರೀಯ ಗಣಿ ಜಾಗೃತಿ ದಿನ' (‘International Mine Awareness Day’ )ವನ್ನಾಗಿ ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ.
9. ಇತ್ತೀಚೆಗೆ ಆಯೋಜಿಸಲಾದ "ಹಮಾರಿ ಪರಂಪರಾ ಹಮಾರಿ ವಿರಾಸತ್" (ನಮ್ಮ ಪರಂಪರೆ ನಮ್ಮ ಆನುವಂಶಿಕತೆ) ಕಾರ್ಯಕ್ರಮವು ಪರಿಶಿಷ್ಟ ಪಂಗಡಗಳ ವರ್ಗಕ್ಕೆ ಸಂಬಂಧಿಸಿದ್ದಾಗಿದೆ.
10. ಇತ್ತೀಚೆಗೆ ಹಂಗೇರಿಯು ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ (ICC) ಹಿಂದೆ ಸರಿಯಲು ನಿರ್ಧರಿಸಿದೆ.
11. ಇತ್ತೀಚೆಗೆ ಭಾರತ ಮತ್ತು ಥೈಲ್ಯಾಂಡ್ ದೇಶವು ಸಾಗರ ಕರಕುಶಲ ಮತ್ತು ಕೈಮಗ್ಗ ಕ್ಷೇತ್ರಗಳು ಸೇರಿದಂತೆ ಒಟ್ಟು 06 ಒಪ್ಪಂದಗಳಿಗೆ ಸಹಿ ಹಾಕಿವೆ.
12. ಇತ್ತೀಚೆಗೆ ಸ್ಪೇಸ್‌ಎಕ್ಸ್ ಸಂಸ್ಥೆಯು ನಾಲ್ಕು ಗಗನಯಾತ್ರಿಗಳೊಂದಿಗೆ 'Fram 2 ಮಿಷನ್' ಅನ್ನು ಪ್ರಾರಂಭಿಸಿದೆ.
— ಸ್ಪೇಸ್‌ಎಕ್ಸ್ -'Fram 2 ಮಿಷನ್' : ಒದು ಧ್ರುವೀಯ ಕಕ್ಷೆಯಿಂದ ಭೂಮಿಯನ್ನು ಅನ್ವೇಷಿಸಲು ಮತ್ತು ಭೂಮಿಯ ಧ್ರುವ ಪ್ರದೇಶಗಳ ಮೇಲೆ ಹಾರಾಟ ಮಾಡಲು ಕೈಗೊಂಡ ಮೊದಲ ಮಾನವ ಬಾಹ್ಯಾಕಾಶ ಹಾರಾಟದ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದರು.
13. ಇತ್ತೀಚೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮೌಂಟ್ ಎವರೆಸ್ಟ್ ಮತ್ತು ಮೌಂಟ್ ಕಾಂಚನಜುಂಗಾ ಶಿಖರಗಳಲ್ಲಿ ಭಾರತೀಯ ಮತ್ತು ನೇಪಾಳಿ ಸೇನೆಯ ಜಂಟಿ ಸೇನಾ ಅಭಿಯಾನಕ್ಕೆ ಚಾಲನೆ ನೀಡಿದರು
14. ಇತ್ತೀಚೆಗೆ ಆರ್ಮಿ ಕಮಾಂಡರ್‌ಗಳ ಸಮ್ಮೇಳನ 2025 (Army Commanders' Conference 2025)ವು ನವದೆಹಲಿಯಲ್ಲಿ ಜರುಗಿತು.
15.ಜಾಗತಿಕವಾಗಿ ಡ್ರೋನ್ ಆಮದುಗಳಲ್ಲಿ ಭಾರತದ ಪಾಲು 22%ರಷ್ಟು ಇದೆ.
16.FY 2025ರವೇಳೆಗೆ ಭಾರತದ ಆರ್ಥಿಕತೆಗೆ ಸೇವಾ ವಲಯದ ಕೊಡುಗೆಯು ಸುಮಾರು 55% ಕ್ಕೆ ಹೆಚ್ಚಾಗುವ ನಿರೀಕ್ಷೆಯಿದೆ.
17. ವಿಶ್ವಸಂಸ್ಥೆಯ ಅದ್ಯಯನದ ಪ್ರಕಾರ, 2047ರ ವೇಳೆಗೆ ಭಾರತದ ಜನಸಂಖ್ಯೆಯ ಶೇ.50% ಕ್ಕಿಂತ ಹೆಚ್ಚು ಜನರು ನಗರಗಳಲ್ಲಿ ವಾಸಿಸುವರಾಗಿರುತ್ತಾರೆ.