•► ಬಾಂಬ್ ಸೈಕ್ಲೋನ್ (Bomb Cyclone) :
━━━━━━━━━━━━━━━━━━━━━━━━━
- ‘ಬಾಂಬ್ ಸೈಕ್ಲೋನ್’ ಎಂದು ಕರೆಸಿಕೊಳ್ಳುವ ಚಳಿಗಾಲದ ಚಂಡಮಾರತವು ಭೂಮಿಯ ಮೇಲ್ಮೈ ಭಾಗದ ಬೆಚ್ಚನೆಯ ಗಾಳಿಗೆ ಭಾರಿ ಶೀತಗಾಳಿ ಡಿಕ್ಕಿ ಹೊಡೆದಾಗ ಉಂಟಾಗುವ ಒತ್ತಡಕ್ಕೆ ಬಾಂಬ್ ಸೈಕ್ಲೋನ್ ಎಂದು ಕರೆಯಲಾಗುತ್ತದೆ.
- 24 ಗಂಟೆಯೊಳಗೆ ಗಾಳಿಯ ಒತ್ತಡ 20 ಮಿಲಿಬಾರ್ ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕುಸಿದಾಗ ಉಂಟಾಗುವ ತೀವ್ರಗತಿಯ ಮಾರುತವನ್ನು ಸಹ ಇದೇ ಹೆಸರಿನಿಂದ ಕರೆಯಲಾಗುತ್ತದೆ.
- ವಾಯುಭಾರ ಒತ್ತಡವು ಇಳಿಕೆಯಾಗಿ, ಶೀತ ಗಾಳಿಯ ದ್ರವ್ಯರಾಶಿಯು ಬಿಸಿಗಾಳಿಯ ದ್ರವ್ಯರಾಶಿಯೊಂದಿಗೆ ಘರ್ಷಣೆಯಾದಾಗ “ಬಾಂಬ್ ಸೈಕ್ಲೋನ್’ ಉಂಟಾಗುತ್ತದೆ.
- ಒತ್ತಡವು ಎಷ್ಟು ಕಡಿಮೆಯಾಗುತ್ತದೋ ಗಾಳಿಯು ಅಷ್ಟೇ ಬಲಿಷ್ಠವಾಗುತ್ತದೆ. ಕೆಲವೇ ಗಂಟೆಗಳ ಅವಧಿಯಲ್ಲಿ ತಾಪಮಾನ 11 ಡಿ.ಸೆ.ಗಿಂತಲೂ ಹೆಚ್ಚು ಇಳಿಯುತ್ತದೆ.
- ಇಂತಹ ಪರಿಸ್ಥಿತಿಯಲ್ಲಿ ಫ್ರಾಸ್ಟ್‌ಬೈಟ್ (ಚಳಿಯ ಹೊಡೆತಕ್ಕೆ ಚರ್ಮಕ್ಕೆ ಆಗುವ ಗಾಯ) ಉಂಟಾಗುವ ಹೆಚ್ಚು ಸಂಭವವಿರುತ್ತದೆ. ಫ್ರಾಸ್ಟ್‌ಬೈಟ್ ಎಂದರೆ ಅತಿಯಾದ ಶೀತಕ್ಕೆ ಮೈ ಒಡ್ಡಿಕೊಂಡರೆ ದೇಹದ ಅಂಗಾಂಶಗಳಿಗೆ ಉಂಟಾಗುವ ಗಾಯ. ಮೂಗು, ಕೈಬೆರಳು, ಕಾಲೆºರಳುಗಳ ಮೇಲೆ ಇದು ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಗ್ಯಾಂಗ್ರೀನ್‌ಗೂ ಕಾರಣವಾಗಬಹುದು.
- ಪ್ರಸ್ತುತ ಅಮೆರಿಕಕ್ಕೆ ಈ ತೀವ್ರ ಶೀತ ಚಂಡಮಾರುತ (ಬಾಂಬ್ ಸೈಕ್ಲೋನ್) ಅಪ್ಪಳಿಸಿದ್ದು, ತಾಪಮಾನ ‘ಮೈನಸ್ 40’ ಡಿಗ್ರಿವರೆಗೆ ಕುಸಿದಿದೆ. ವಿಶೇಷವಾಗಿ ಉತ್ತರ ಮತ್ತು ದಕ್ಷಿಣ ಡಕೋಟಾ, ಓಕ್ಲಹಾಮ, ಅಯೋವಾ ಮತ್ತು ಡಲ್ಲಾಸ್, ಟೆಕ್ಸಾಸ್ ಗಳೊಳಗೊಂಡಂತೆ ಎಲ್ಲ ರಾಜ್ಯಗಳ ಮೇಲೂ ಪರಿಣಾಮ ಬೀರಿದೆ.