"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday, 3 November 2021

•► COP26 / ಗ್ಲಾಸ್ಗೋ ಸಮಾವೇಶ / ವಿಶ್ವಸಂಸ್ಥೆಯ ಜಾಗತಿಕ ಹವಾಮಾನ ಬದಲಾವಣೆ ಸಮ್ಮೇಳನ (UNFCCC): (COP26 / Glasgow Conference / (UNFCCC) United Nations Global Climate Change Conference)

 •► COP26 / ಗ್ಲಾಸ್ಗೋ ಸಮಾವೇಶ / ವಿಶ್ವಸಂಸ್ಥೆಯ ಜಾಗತಿಕ ಹವಾಮಾನ ಬದಲಾವಣೆ ಸಮ್ಮೇಳನ  (UNFCCC):
(COP26 / Glasgow Conference / (UNFCCC) United Nations Global Climate Change Conference)

━━━━━━━━━━━━━━━━━━━━━━━━━━━━━━━━━━
ಜಾಗತಿಕ ಸರಾಸರಿ ತಾಪಮಾನ ಏರಿಕೆಯನ್ನು ಹವಾಮಾನ ಬದಲಾವಣೆ, ಹವಾಮಾನ ವೈಪರೀತ್ಯ ಎಂದೆಲ್ಲಾ ಕರೆಯಲಾಗುತ್ತದೆ. ಜಾಗತಿಕ ತಾಪಮಾನ ಏರಿಕೆಯನ್ನು ತಡೆಗಟ್ಟುವ ಸಲುವಾಗಿ ವಿಶ್ವ ಸಂಸ್ಥೆಯ ನೇತೃತ್ವದಲ್ಲಿ ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳು ಒಂದೆಡೆ ಕೂತು, ಸಮಾಲೋಚನೆ ನಡೆಸುವುದೇ ‘ಕಾನ್ಫರೆನ್ಸ್ ಆಫ್ ಪಾರ್ಟೀಸ್‌-ಸಿಒಪಿ’. ವಿಶ್ವ ಸಂಸ್ಥೆಯು ಇಂತಹ ಸಮಾವೇ‍ಶಗಳನ್ನು ನಡೆಸಿಕೊಂಡು ಬಂದಿತ್ತಾದರೂ, ಇದಕ್ಕೊಂದು ವ್ಯವಸ್ಥಿತ ರೂಪ ನೀಡಿದ್ದು 1995ರಲ್ಲಿ.


1995ರಲ್ಲಿ ಸಿಒಪಿಯನ್ನು ರಚಿಸಲಾಯಿತು. ಜರ್ಮನಿಯ ಬರ್ಲಿನ್‌ನಲ್ಲಿ 1995ರ ಮಾರ್ಚ್ 28ರಿಂದ ಏಪ್ರಿಲ್‌ 7ರವರೆಗೆ ಈ ಸಮಾವೇಶ ನಡೆಯಿತು. 2020ರ ವೇಳೆಗೆ ಜಾಗತಿಕ ತಾಪಮಾನ ಏರಿಕೆಯನ್ನು ಸಂಪೂರ್ಣ ನಿಯಂತ್ರಣಕ್ಕೆ ತರುವ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ವಾಹನಗಳಿಂದಾಗುವ ವಾಯುಮಾಲಿನ್ಯ ಮತ್ತು ಕೈಗಾರಿಕೆಗಳಿಂದಾಗುವ ವಾಯುಮಾಲಿನ್ಯವನ್ನು ಕಡಿಮೆ ಮಾಡುವುದು ಮತ್ತು ಆ ಮೂಲಕ ಜಾಗತಿಕ ತಾಪಮಾನವನ್ನು ನಿಯಂತ್ರಿಸುವುದು ಈ ಸಮಾವೇಶದ ಪ್ರಮುಖ ಗುರಿಗಳಲ್ಲಿ ಒಂದಾಗಿತ್ತು.

ಗ್ಲಾಸ್ಗೋ ಸಮಾವೇಶ (COP26) —

l ಇಟಲಿ ಸಹಭಾಗಿತ್ವದಲ್ಲಿ, ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಹವಾಮಾನ ಬದಲಾವಣೆ ಸಂಬಂಧಿತ ಶೃಂಗಸಭೆಯು ಅ.31ರಿಂದ ಆರಂಭವಾಗಿದ್ದು, ನ.12ರವರೆಗೆ ನಡೆಯಲಿದೆ

l ಯುಎನ್‌ಎಫ್‌ಸಿಸಿಸಿ (UNFCCC) ಎಂಬುದು ಹವಾಮಾನ ಬದಲಾವಣೆಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಸಂರಚನಾ ಸಮಾವೇಶ. 1994ರಲ್ಲಿ ಅಸ್ತಿತ್ವಕ್ಕೆ ಬಂದ ಯುಎನ್‌ಎಫ್‌ಸಿಸಿಸಿ, ಭಾರತ, ಅಮೆರಿಕ, ಫ್ರಾನ್ಸ್‌, ಇಟಲಿ ಸೇರಿದಂತೆ 197 ರಾಷ್ಟ್ರಗಳ ಸದಸ್ಯತ್ವ ಹೊಂದಿದೆ

l 2020 ನವೆಂಬರ್‌ನಲ್ಲಿ ನಡೆಯಬೇಕಿದ್ದ ಈ ಸಮಾವೇಶವು ಕೋವಿಡ್‌–19 ಸಾಂಕ್ರಾಮಿಕದ ಕಾರಣದಿಂದ ತಡವಾಗಿದೆ

l ಸದಸ್ಯ ರಾಷ್ಟ್ರಗಳು, ಭೂಮಿಯ ತಾಪಮಾನ ಏರಿಕೆಯನ್ನು ನಿಧಾನಗೊಳಿಸಬೇಕು ಹಾಗೂ ಹಸಿರುಮನೆ ಅನಿಲಗಳ (ಇಂಗಾಲದ ಡೈ ಆಕ್ಸೈಡ್‌, ಕ್ಲೋರೊಫೊರೊ ಕಾರ್ಬನ್‌ನಂಥ ಅನಿಲಗಳು) ಹೊರಸೂಸುವಿಕೆಯನ್ನು ನಿಯಂತ್ರಿಸಬೇಕು ಎಂಬುದು ಇದರ ಕಾರ್ಯಸೂಚಿ

l ಜಾಗತಿಕ ತಾಪಮಾನವು, 2030ರ ವೇಳೆಗೆ ಕೈಗಾರಿಕಾಪೂರ್ವ ಮಟ್ಟಕ್ಕಿಂತ 1.5 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ಮಿತಿಯನ್ನು ದಾಟಬಾರದು ಹಾಗೂ 2050ರ ವೇಳೆಗೆ ಜಗತ್ತಿನಾದ್ಯಂತ ಹಸಿರುಮನೆಗಳ ಅನಿಲಗಳ ಹೊರಸೂಸುವಿಕೆಯು ಸ್ಥಗಿತ (ನೆಟ್‌ ಝೀರೊ) ಆಗಬೇಕು ಎಂಬುದು ಪ್ರಮುಖ ಗುರಿ

l ಈ ಗುರಿ ತಲುಪುವಲ್ಲಿ, ಅರಣ್ಯ ಬೆಳೆಸುವುದು ಸೇರಿದಂತೆ ನೈಸರ್ಗಿಕ ಪರಿಹಾರೋಪಾಯಗಳನ್ನು ಕಂಡುಕೊಳ್ಳುವುದು, ಬ್ಯಾಟರಿಚಾಲಿತ ವಾಹನಗಳ ಬಳಕೆ ಹಾಗೂ ಮರುಬಳಕೆ ಕ್ಷೇತ್ರದಲ್ಲಿ ಹೂಡಿಕೆಗೆ ಉತ್ತೇಜನ ನೀಡುವುದು ಪ್ರಮುಖ ಆದ್ಯತೆಯಾಗಿದೆ

l ನೈಸರ್ಗಿಕ ಆವಾಸಸ್ಥಾನ–ಸಮುದಾಯಗಳನ್ನು ಸಂರಕ್ಷಿಸುವ ಕ್ರಮಕ್ಕೆ ಮುಂದಾಗುವುದು

l 2015ರ ಪ್ಯಾರಿಸ್‌ ಶೃಂಗಸಭೆಯ ಒಪ್ಪಂದಕ್ಕೆ ಬದ್ಧತೆ ವ್ಯಕ್ತಪಡಿಸಿದ್ದ ದೇಶಗಳು, ಆ ದಿಸೆಯಲ್ಲಿ ಕೈಗೊಂಡ ಉಪಕ್ರಮಗಳೇನು? ಗುರಿ ಸಾಧನೆಯಲ್ಲಿನ ಪ್ರಗತಿಯನ್ನು ವಿವರಿಸಲು ಹಾಗೂ ಮುಂದಿನ ದಿನಗಳಲ್ಲಿ ಹಾಕಿಕೊಳ್ಳುವ ಗುರಿಯ ಬಗ್ಗೆ ಬದ್ಧತೆಯನ್ನು ವ್ಯಕ್ತಪಡಿಸಲು ಸದಸ್ಯ ರಾಷ್ಟ್ರಗಳಿಗೆ ಸಮಾವೇಶ ಅವಕಾಶ ಒದಗಿಸಿದೆ

l ಭೂಮಿಯ ಭವಿಷ್ಯಕ್ಕಾಗಿ ಹಾಗೂ ಗುರಿ ಸಾಧನೆಗಾಗಿ ಹೆಚ್ಚು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಹಾಗೂ ಈ ದಿಸೆಯಲ್ಲಿ ಅಭಿವೃದ್ಧಿ ಹೊಂದಿದ ದೇಶಗಳು, ಬಡ ಹಾಗೂ ಅಭಿವೃದ್ಧಿ ಶೀಲ ರಾಷ್ಟ್ರಗಳಿಗೆ ನೆರವಾಗುವಂಥ  ದೃಢವಾದ ಕಾರ್ಯಯೋಜನೆಗಳನ್ನು ರೂಪಿಸುವುದು ಹಾಗೂ ಜಾಗತಿಕ ಒಗ್ಗಟ್ಟು ಪ್ರದರ್ಶಿಸುವುದು ಸಮಾವೇಶದ ಕಾರ್ಯಸೂಚಿಯಲ್ಲಿ ಸೇರಿದೆ.
(ಕೃಪೆ : ಪ್ರಜಾವಾಣಿ)

•► ಫಾರ್ಮಾಲಿನ್ (In News) (Formalin)

 •► ಫಾರ್ಮಾಲಿನ್ (In News)
(Formalin)

━━━━━━━━━━━━━━━━━

- ಫಾರ್ಮಾಲ್ಡಿಹೈಡ್‍ನ ನೀರಿನೊಂದಿಗೆ 30-45% ಜಲೀಯ ದ್ರಾವಣವು ಫಾರ್ಮಾಲಿನ್ ಆಗಿದೆ.

- ಫಾರ್ಮಾಲ್ಡಿಹೈಡ್ ವು ಹೈಡ್ರೋಜನ್, ಆಮ್ಲಜನಕ ಮತ್ತು ಕಾರ್ಬನ್ ನಿಂದ ತಯಾರಿಸಿದ ಸರಳ ರಾಸಾಯನಿಕ ಸಂಯುಕ್ತವಾಗಿದೆ

- ಎಲ್ಲಾ ಜೀವಿ ರೂಪಗಳು – ಬ್ಯಾಕ್ಟೀರಿಯಾ, ಸಸ್ಯಗಳು, ಮೀನು, ಪ್ರಾಣಿಗಳು ಮತ್ತು ಮಾನವರು – ಜೀವಕೋಶದ ಚಯಾಪಚಯದ ಭಾಗವಾಗಿ ಫಾರ್ಮಾಲ್ಡಿಹೈಡ್ ಅನ್ನು ನೈಸರ್ಗಿಕವಾಗಿ ಉತ್ಪತ್ತಿ ಮಾಡುತ್ತವೆ.

- ಫಾರ್ಮಾಲ್ಡಿಹೈಡ್ ಬಹುಶಃ ಅದರ ಸಂರಕ್ಷಕ ಮತ್ತು ಬ್ಯಾಕ್ಟೀರಿಯಾ-ವಿರೋಧಿ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ, ಆದರೆ ಫಾರ್ಮಾಲ್ಡಿಹೈಡ್-ಆಧಾರಿತ ರಸಾಯನಶಾಸ್ತ್ರವನ್ನು ಮೌಲ್ಯ-ವರ್ಧಿತ ಉತ್ಪನ್ನಗಳ ವ್ಯಾಪಕ ಶ್ರೇಣಿಯನ್ನು ಮಾಡಲು ಬಳಸಲಾಗುತ್ತದೆ.

- ಫಾರ್ಮಾಲಿನ್ ಕಣ್ಣು, ಗಂಟಲು, ಚರ್ಮ ಮತ್ತು ಹೊಟ್ಟೆಯಲ್ಲಿ ಕಿರಿಕಿರಿಯನ್ನು ಉಂಟುಮಾಡುತ್ತದೆ. ದೀರ್ಘಾವಧಿಗೆ  ಮೂತ್ರಪಿಂಡಗಳು, ಪಿತ್ತಜನಕಾಂಗಕ್ಕೆ ಹಾನಿಯಾಗುತ್ತದೆ ಮತ್ತು ಕ್ಯಾನ್ಸರ್ ಗಳಿಗೆ ಕಾರಣವಾಗಬಹುದು.

- ಫಾರ್ಮಲಿನ್‌ ಎಂಬುದು ಶವ ಕೆಡದಂತೆ ಇಡಲು ಬಳಸುವ ರಾಸಾಯನಿಕ ಕೂಡ!

- ಇತ್ತೀಚೆಗೆ ಮೀನುಗಾರಿಕಾ ಉದ್ಯಮದಲ್ಲಿ, ಫಾರ್ಮಾಲಿನ್ ಅಥವಾ ಫಾರ್ಮಾಲ್ಡಿಹೈಡ್ ವು  ದೀರ್ಘಕಾಲದವರೆಗೆ ಮೀನುಗಳನ್ನು ತಾಜಾವಾಗಿಡಲು ಸಹಾಯ ಮಾಡುತ್ತದೆ ಎಂಬ ಕಾರಣಕ್ಕಾಗಿ ಮೀನುಗಳಲ್ಲಿ ಸಿಂಪಡಿಸಲ್ಪಡುತ್ತದೆ ಅಥವಾ ಮೀನುಗಳಿಗೆ ಚುಚ್ಚಲಾಗುತ್ತದೆ ಅಥವಾ ಮೀನುಗಳನ್ನು ದ್ರಾವಣದಲ್ಲಿ ಅದ್ದಿಲಾಗುತ್ತದೆ. ಇದು ವಿವಾದಕ್ಕೀಡು ಮಾಡಿದೆ.

•► ಕಝಾಕಿಸ್ತಾನ್ (in News) (Kazakhstan)


•►  ಕಝಾಕಿಸ್ತಾನ್  (in News)
(Kazakhstan)

━━━━━━━━━━━━━━━━━

▪️ಇದು ಬಹುಪಾಲು ಮಧ್ಯ ಏಷ್ಯಾದಲ್ಲಿ ನೆಲೆಗೊಂಡಿರುವ ಖಂಡಾಂತರ ದೇಶವಾಗಿದ್ದು, ಅದರ ಪಶ್ಚಿಮ ಭಾಗಗಳು ಪೂರ್ವ ಯುರೋಪ್‌ನಲ್ಲಿವೆ.

▪️ಇದು ರಷ್ಯಾ, ಚೀನಾ, ಕಿರ್ಗಿಸ್ತಾನ್, ಉಜ್ಬೇಕಿಸ್ತಾನ್, ತುರ್ಕಮೆನಿಸ್ತಾನ್ ಜೊತೆಗೆ ಗಡಿಗಳನ್ನು ಹಂಚಿಕೊಂಡಿದೆ ಮತ್ತು ಕ್ಯಾಸ್ಪಿಯನ್ ಸಮುದ್ರದ ಹೆಚ್ಚಿನ ಭಾಗವನ್ನು ಸಹ ಹೊಂದಿದೆ.

▪️ಇದು ಕೇವಲ 37 ಕಿಲೋಮೀಟರ್ ದೂರದಲ್ಲಿದ್ದರೂ ಮಂಗೋಲಿಯಾ ಗಡಿಯನ್ನು ಹೊಂದಿಲ್ಲ.

▪️KAZIND 2019 - ಭಾರತ ಮತ್ತು ಕಝಾಕಿಸ್ತಾನ್ ಸೇನೆಯ ನಡುವಿನ ವಾರ್ಷಿಕ ಮಿಲಿಟರಿ ಸಮರಾಭ್ಯಾಸ.

▪️ಅಧಿಕಾರದಿಂದ ಕೆಳಗಿಳಿದ ನಾಯಕ ನುರ್ ಸುಲ್ತಾನ್ ನಜರ್ಬಯೇವ್ ಅವರನ್ನು ಗೌರವಿಸಲು ಇದು ತನ್ನ ರಾಜಧಾನಿ ಅಸ್ತಾನಾವನ್ನು ನುರ್ ಸುಲ್ತಾನ್  ಎಂದು ಮರುನಾಮಕರಣ ಮಾಡಿದೆ.

▪️WTO ದ ಹನ್ನೆರಡನೇ ಮಂತ್ರಿಗಳ ಸಮ್ಮೇಳನವು (MC12) ಜೂನ್ 2020 ರಲ್ಲಿ ಕಝಾಕಿಸ್ತಾನ್‌ ನಿರ್ಧರಿತ - WTO ಪ್ರಕಾರ ಇದು 2021 ರ ಮಧ್ಯದಲ್ಲಿ ಅಥವಾ ಕೊನೆಯಲ್ಲಿ ನಡೆಯಬಹುದು.