"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday, 3 January 2014

ಪ್ರಸ್ತುತ ಆಧುನಿಕ ಶಿಕ್ಷಣ ಪದ್ಧತಿ: ಮೂಲ ಗುಣಮಟ್ಟ:

  • ಪ್ರಸ್ತುತ ಆಧುನಿಕ ಶಿಕ್ಷಣ ಪದ್ಧತಿ: ಮೂಲ ಗುಣಮಟ್ಟ:
ಅನಾದಿ ಕಾಲದಿಂದಲೂ ಭಾರತದಲ್ಲಿ ಸುವ್ಯವಸ್ಥಿತ ಶಿಕ್ಷಣ ಪದ್ಧತಿ ಇತ್ತು. ಗುರು ಪರಂಪರೆ ಮುಖೇನ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಗೈದ ಉದಾಹರಣೆಗಳು ಇವೆ. ಅದಕ್ಕೆ ಸಾಕ್ಷಿಯಾಗಿ ನಳಂದ, ತಕ್ಷಶಿಲ ಮತ್ತು ವಿಕ್ರಮಶೀಲ ವಿಶ್ವವಿದ್ಯಾನಿಲಯಗಳು ಇಂದು ದಂತ ಕಥೆಯೊ ಎಂದು ಭಾಸವಾಗುವಂತಹ ಶಿಕ್ಷಣದ ಉತ್ತುಂಗತೆಯನ್ನು ಸಾರಿವೆ. ಅಂದಿನ ಶಿಕ್ಷಣ ಕೇಂದ್ರಗಳು ಕೇವಲ ಧಾಮರ್ಿಕ ಕಲಿಕಾ ತಾಣಗಳಾಗಿರದೆ, ವಿಜ್ಞಾನ, ಹಸ್ತ ಸಾಮುದ್ರಿಕೆ, ಔಷಧ ಶಾಸ್ತ್ರ, ವೇದಾಂತ ಮುಂತಾದ ಕ್ಷೇತ್ರಗಳಲ್ಲಿ ಪಾರಂಗತೆಯನ್ನು ಸಾಧಿಸಿದ್ದವು.

ಜಾಗತೀಕರಣದ ಸಾಧನೆಗಳಿಗೆ ಸರಿಸಮವಾದ ವಿದ್ವತ್ತು, ಬುದ್ಧಿಮತ್ತೆ, ಪುರಾತನ ಭಾರತದಲ್ಲೂ ಕಂಡು ಬಂದಿರುವುದು ನಮಗೆ ಸೋಜಿಗ ತರುವ ಸಂಗತಿಯೇ. ಮಧ್ಯಕಾಲೀನದಲ್ಲಿ ಮುಕ್ತಾಬ್ ಮತ್ತು ಮದರಸಗಳು ಎಲ್ಲಾ ಕ್ಷೇತ್ರಗಳಲ್ಲಿ ಶಿಕ್ಷಣ ನೀಡುತ್ತಿದ್ದವು. ಚರಿತ್ರೆಯತ್ತ ಹೊರಳು ನೋಟ ಹರಿಸಿದಾಗ, ಅಂದಿನ ಯಾವುದೇ ಧಾಮರ್ಿಕ ಶಿಕ್ಷಣ ಕೇಂದ್ರಗಳು ಕೇವಲ ಧರ್ಮಬೋಧನೆಗಷ್ಟೇ ಸೀಮಿತವಾಗಿರದೆ ಜ್ಞಾನ ಸಂಪತ್ತನ್ನು ವೃದ್ಧಿಸುವ ತಾಣಗಳಾಗಿದ್ದು ಅಂದಿನವರ ಹೃದಯ ವೈಶಾಲ್ಯಕ್ಕೆ ಸಾಕ್ಷಿಗಳಾಗಿವೆ.

ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಶಿಕ್ಷಣವು ಸಾಂಸ್ಥಿಕ ರೂಪದಲ್ಲಿರಲಿಲ್ಲ ನಿಜ. ಆದರೆ `ಶಿಕ್ಷಣ' ಸಂಸ್ಥೆಗಳ ಚೌಕಟ್ಟಿಗೆ ಬಂದದ್ದು ಬ್ರಿಟಿಷರಿಂದ ಎಂಬುದು ತಪ್ಪು ತಿಳಿವಳಿಕೆ ಎಂದು ಧರಂಪಾಲ್ ಸಂಶೋಧನೆ ಹೇಳುತ್ತದೆ. ಅನೇಕ ಬ್ರಿಟಿಷ್ ಅಧಿಕಾರಿಗಳ ವರದಿ ಮೂಲಕ ತಿಳಿದು ಬರುವುದೇನೆಂದರೆ ಭಾರತದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳಿದ್ದು ವಿವಿಧ ಕ್ಷೇತ್ರದಲ್ಲಿ ಶಿಕ್ಷಣ ನೀಡುತ್ತಿದ್ದವು. ಆದರೆ ಬ್ರಿಟಿಷರು ತಂದ ಶಿಕ್ಷಣ ಪದ್ಧತಿಯು ಆಳುವ ವರ್ಗಕ್ಕೆ ಬೇಕಾದಂತಹ ಗುಲಾಮಗಿರಿಯನ್ನು ಪ್ರೋತ್ಸಾಹಿಸುವಂತಾಯಿತು.

ಶಿಕ್ಷಣದ ನಿಜವಾದ ಅರ್ಥವೇನು? ಇಂದಿನ ಶಿಕ್ಷಣದ ಗುರಿ ಎತ್ತ ಸಾಗಿದೆ? ಇಂದಿನ ಹೈಟೆಕ್ ಶಾಲೆಗಳು ಎಂತಹ ಮಾನವ ಸಂಪನ್ಮೂಲವನ್ನು ಸೃಷ್ಟಿಸಬಯಸುತ್ತಿವೆ, ಇಂದಿನ ವಿದ್ಯಾವಂತ ನಮ್ಮ ಸಮಾಜಕ್ಕೆ ಹೇಗೆ ಸಲ್ಲುತ್ತಾನೆ.. ಎಂಬ ಸಾಲು ಸಾಲು ಪ್ರಶ್ನೆಗಳು ಮೂಡುವುದು ಸಹಜ. ಇವಾನ್ ಇಲಿಚ್ ಹೇಳುವಂತೆ ಈ ಆಧುನಿಕ ಶಿಕ್ಷಣ ಪದ್ಧತಿಯು ಪ್ರಶ್ನಿಸದೆ ಒಪ್ಪಿಕೊಳ್ಳುವ, ದಕ್ಕಿಸಿಕೊಳ್ಳದೆ ಪಡೆದುಕೊಳ್ಳುವ ವರ್ಗವೊಂದು ಸೃಷ್ಟಿಸಿತು.

ಶಿಕ್ಷಣ ಕ್ಷೇತ್ರದಲ್ಲಿ ಕಾಲಕಾಲಕ್ಕೆ ಅನೇಕ ರಾಷ್ಟ್ರೀಯ ನೀತಿಗಳು ರಚನೆಗೊಂಡು ಜಾರಿಯಾದವು. ಆದರೂ ಸರ್ವರಿಗೂ ಸಮಾನ ಗುಣಮಟ್ಟದ ಶಿಕ್ಷಣ ನೀಡುವುದು ಇನ್ನೂ ಸಾಧ್ಯವಾಗಿಲ್ಲ. ಇತ್ತೀಚೆಗೆ ಕೌಶಲ್ಯ ಅಭಿವೃದ್ಧಿಗೆ ವಿಶೇಷ ಗಮನ ಹರಿಸಲಾಗುತ್ತಿದೆ. ಶಿಕ್ಷಣವನ್ನು ನೀಡುವ ಶಿಕ್ಷಕರಿಗೆ ತರಬೇತಿಯನ್ನು ನೀಡಿ ಅವರನ್ನು ಮತ್ತಷ್ಟು ಸಬಲಗೊಳಿಸಿ ಗುಣಾತ್ಮಕ ಶಿಕ್ಷಣ ನೀಡಲು ಪ್ರಯತ್ನಿಸಲಾಗುತ್ತಿದೆ. ಬುದ್ಧಿಮತ್ತೆಯ ವೃದ್ಧಿಗಾಗಿ ವಿಶೇಷ ಪಠ್ಯಕ್ರಮದ ಅಗತ್ಯದ ಅರಿವಾಗಿದೆ.

ಶಿಕ್ಷಣಕ್ಕೆ ಅತ್ಯಗತ್ಯವಾದ ಭಾಷೆಯ ಬಗ್ಗೆ ಒಂದಿಷ್ಟು ಗಂಭೀರ ಚಚರ್ೆಯಾಗುತ್ತಿದೆ. ಹಾಗೇ ಈಗಾಗಲೇ ಅಳಿದು ಹೋಗಿರುವ, ಅಳಿವಿನಂಚಿನಲ್ಲಿ ಕೊನೆ ಉಸಿರೆಳೆಯುತ್ತಿರುವ ಭಾಷೆಗಳನ್ನು ಉಳಿಸಿಕೊಳ್ಳಲು ಹೇಗೆ ಪ್ರಯತ್ನ ಮಾಡಬೇಕೆಂಬ ಗಂಭೀರ ಪ್ರಶ್ನೆ ನಮ್ಮ ಮುಂದಿದೆ.
ಜ್ಞಾನವೃದ್ಧಿಗೆ ಮೂಲ ಸೆಲೆಯಾದ ಪ್ರಾಥಮಿಕ ಶಿಕ್ಷಣವು ಅನೇಕ ಬದಲಾವಣೆ, ಚಟುವಟಿಕೆಗಳನ್ನು ಅಳವಡಿಸಿಕೊಂಡರೂ ಕೂಡ ಇನ್ನೂ ಶಿಕ್ಷಣ ವ್ಯವಸ್ಥೆಯಲ್ಲಿ ಏಕತೆ ಸಾಧಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಲೇ ನಾವಿಂದು ಅಸಮಾನತೆಯ ಕಂದಕವನ್ನು ಸೃಷ್ಟಿಸಿಕೊಳ್ಳುತ್ತಿದ್ದೇವೆನೋ ಎನಿಸುತ್ತದೆ.

ಇ ಶಿಕ್ಷಣ, ವರವಾಗಿ ಬಂದಷ್ಟೇ ಶಾಪವೂ ಆಗುತ್ತಿರುವುದು, ಶಿಕ್ಷಿತ ಪ್ರಜೆಯ ಮನೋವಿಕಾರಕ್ಕೆ ಕಾರಣವಾಗುತ್ತಿರುವುದು ವಿಷಾದನೀಯ!
ಸತ್ಯವೆಂಬುದು ಬಹುಶಃ ಅಡ್ಡದಾರಿಯೇ ಇಲ್ಲದ ಪ್ರಪಂಚ. ಸತ್ಯ ಮತ್ತು ಬಿಡುಗಡೆ (ವಿಮೋಚನೆ) ಒಂದೇ ನಾಣ್ಯದ ಎರಡು ಮುಖಗಳೆನ್ನುತ್ತಾರೆ, ಜೆ. ಕೃಷ್ಣಮೂತರ್ಿ. ಮಂಡೋಪನಿಷದ್ ಹೇಳುವಂತೆ `ಸ ವಿದ್ಯಾ ಯಾ ವಿಮುಕ್ತಯೇ' - ವಿಮೋಚನೆಗೊಳಿಸುವುದೇ ವಿದ್ಯೆ ಎಂಬುದನ್ನು ಜ್ಞಾಪಿಸಿಕೊಳ್ಳೋಣ.
(ಮೂಲ: ಯೋಜನಾ ಪತ್ರಿಕೆ)

No comments:

Post a Comment