•► 2020ರ IAS (ಯುಪಿಎಸ್‌ಸಿ) ನಾಗರಿಕ ಸೇವಾ (ಪ್ರಿಲಿಮನರಿ) ಪರೀಕ್ಷೆ ಪ್ರಶ್ನೆ ಪತ್ರಿಕೆಯ ವಿಶ್ಲೇಷಣೆ
(Analysis of Question paper UPSC CSE 2020)
━━━━━━━━━━━━━━━━━━━━━━━━━
★ ಐಎಎಸ್ ಪೂರ್ವಭಾವಿ ಪರೀಕ್ಷೆ 2020
(IAS Preliminary Exam 2020)
★ಸ್ಪರ್ಧಾರ್ಥಿಗಳಲ್ಲಿ ಸೂಚನೆ -
ಇಲ್ಲಿ ವ್ಯಕ್ತಪಡಿಸಿದ ವಿಚಾರವು ಹಲವು ನಂಬಲರ್ಹವಾದ ಮೂಲಗಳಿಂದ ಸಂಗ್ರಹಿಸಿ, ಪರೀಕ್ಷೆ ಎದುರಿಸಿದ ಸ್ಪರ್ಧಾರ್ಥಿಗಳಿಂದ ನೇರವಾಗಿ ಚರ್ಚಿಸಿ ನನ್ನ ಸ್ವಂತ ಅಭಿಪ್ರಾಯದೊಂದಿಗೆ ಮಂಡಿಸಲಾಗಿರುವುದು. ಈ ಕೆಳಗೆ ನೀಡಲಾದ ಮಾಹಿತಿಯು ನನ್ನ ಜ್ಞಾನ ಪರಿಮಿತಿಯಲ್ಲಿ ಸಂಗ್ರಹಿಸಿದ್ದು ಆದಾಗ್ಯೂ ಇದೇ ಅಂತಿಮವಲ್ಲ!
ಶೀಘ್ರದಲ್ಲೇ ಯುಪಿಎಸ್ಸಿ ಪ್ರಿಲಿಮ್ಸ್ ಪರೀಕ್ಷೆ 2020ರಲ್ಲಿ ಕೇಳಲಾದಾಗ ವಿಷಯವಾರು ಪ್ರಶ್ನೆಗಳ ವಿಶ್ಲೇಷಣೆ (UPSC Prelims Subject-wise Exam Analysis 2020)ಯನ್ನು ನಿಮ್ಮ 'ಸ್ಪರ್ಧಾಲೋಕ'ದಲ್ಲಿ ಮುಂದಿಡುವೆ.
ಏನಾದರೂ ತಪ್ಪಿದ್ದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತನ್ನಿ (Gmail : yaseen7ash@gmail.com)
-----------------------------------------------------------------------------------------------------
• ಕರ್ನಾಟಕ ರಾಜ್ಯದಿಂದ —
ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಅಕ್ಟೋಬರ್ 4ರಂದು ನಡೆಸಿದ ನಾಗರಿಕ ಸೇವಾ (ಪ್ರಿಲಿಮನರಿ) ಪರೀಕ್ಷೆಗೆ ಕರ್ನಾಟಕ ರಾಜ್ಯದಿಂದ ಸುಮಾರ 37 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
• ಈ ವರ್ಷದ ಪ್ರಿಲಿಮ್ಸ್ ಪತ್ರಿಕೆಯು ಯುಪಿಎಸ್‍ಸಿಯು ವಿದ್ಯಾರ್ಥಿಗಳಿಂದ ಏನನ್ನು ನಿರೀಕ್ಷಿಸುತ್ತಿದೆ ಎಂಬ ಬಗ್ಗೆ ಕಠಿಣ ಚರ್ಚೆಯನ್ನು ಪ್ರಾರಂಭಿಸಿದೆ. ಅನೇಕ ಅಭ್ಯರ್ಥಿಗಳು ಪತ್ರಿಕೆಯನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗಿತ್ತೆಂದು ಅಭಿಪ್ರಾಯಪಟ್ಟಿದ್ದಾರೆ.
• ಪ್ರಶ್ನೆ ಪತ್ರಿಕೆಯಲ್ಲಿ ಅಭ್ಯರ್ಥಿಯು ಯಾವ ಪ್ರಶ್ನೆಯನ್ನು ಉತ್ತರಿಸಬೇಕೆನ್ನುವುದಕ್ಕಿಂತ ಯಾವ ಪ್ರಶ್ನೆಯನ್ನು ಬಿಡಬೇಕೆಂದು ನಿರ್ಣಯಿಸುವುದು ಹೆಚ್ಚು ಮುಖ್ಯವಾಗಿತ್ತು!
1. ಪ್ರಶ್ನೆ ಪತ್ರಿಕೆಯ ಕಠಿಣತೆಯ ಮಟ್ಟ - ಮಧ್ಯಮ ಕಠಿಣತೆಯಿಂದ ಕಷ್ಟಕರ ಪ್ರಶ್ನೆಗಳನ್ನು ಹೊಂದಿರುವಂಥವು.
2. ವನ್ಯ ಜೀವಿ ವೈವಿಧ್ಯ ಮತ್ತು ನೈಸರ್ಗಿಕ ಉದ್ಯಾನಗಳ ಕುರಿತು ಹೆಚ್ಚಿನ ನಕ್ಷೆ ಆಧಾರಿತ ಭೌಗೋಳಿಕ ಪ್ರಶ್ನೆಗಳಿದ್ದವು.
3. ಪ್ರಶ್ನಾವಳಿಯಲ್ಲಿ ಕೃಷಿ (Agriculture)ಯನ್ನು ಆಧರಿಸಿದ ಸಾಮಾನ್ಯ ಪ್ರಶ್ನೆಗಳಿದ್ದು, ಅವು ಕೃಷಿ ಸಂಬಂಧಿತ ನಿರ್ದಿಷ್ಟ ಸಂಗತಿಗಳಿಗಿಂತ ಅವುಗಳ ಬಗ್ಗೆ ಹೆಚ್ಚಿನ ತಿಳುವಳಿಕೆ ಅಗತ್ಯತೆಯನ್ನು ಬಯಸಿರುವಂಥವು.
4. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅಭ್ಯರ್ಥಿಗಳ ಐಎಎಸ್ ಕುರಿತಾದ Mindset ವಿಚಲಿತಗೊಳ್ಳುವಂತಹ ಸಾಮಾನ್ಯ ಸಂಗತಿ(raw facts)ಗಳನ್ನಾಧರಿಸಿದ ಕೆಲವು ಪ್ರಶ್ನೆಗಳು ಕೇಳಲಾಗಿದೆ!
5. ಯುಪಿಎಸ್‌ಸಿ ಪರೀಕ್ಷೆಯ ಗುಣಮಟ್ಟವನ್ನು ತೋರಿಸುವಂತಹ ಪ್ರಶ್ನೆಗಳು ಅಂದರೆ ಗಾಂಧಿ ಮತ್ತು ಮಾರ್ಕ್ಸ್ ಸಿದ್ಧಾಂತಗಳಂತಹ ಪರಿಕಲ್ಪನಾ (Conceptual) ಪ್ರಶ್ನೆಗಳನ್ನು ಕೇಳಿದ್ದು ನಿಜವಾಗಿಯೂ ಶ್ಲಾಘನೀಯವಾಗಿದ್ದು.
6. ರಾಜಕೀಯ(Polity) ಆಧಾರಿತ ಪ್ರಶ್ನೆಗಳು — ಸರಳತೆಯಿಂದ ಮಧ್ಯಮ ಕಷ್ಟಕರವಾದವುಗಳು. ಯೋಜನೆಗಳಿಗೆ ಸಂಬಂಧಪಟ್ಟಂತೆ ಕೇವಲ 2 ಪ್ರಶ್ನೆಗಳನ್ನು ಕೇಳಲಾಗಿತ್ತು.
7. ಇತಿಹಾಸ (History) ಆಧಾರಿತ ಪ್ರಶ್ನೆಗಳು — ಪ್ರಾಚೀನ ಮತ್ತು ಮಧ್ಯಕಾಲೀನ ಇತಿಹಾಸಕ್ಕೆ ಹೆಚ್ಚಿನ ಒತ್ತು ಕೊಟ್ಟಿರುವಂಥದು.
8. ಆರ್ಥಿಕತೆ (Economy) ಗೆ ಸಂಬಂಧಿಸಿದ ಪ್ರಶ್ನೆಗಳು — ವಾಣಿಜ್ಯ ಕಾಗದ, ಸಗಟು ಬೆಲೆ ಸೂಚ್ಯಂಕ (WPI), ಹಣದ ಪೂರೈಕೆ ಆಧಾರಿತ ಆರ್ಥಿಕ ಪ್ರಶ್ನೆಗಳು ಶುದ್ಧ ಪರಿಕಲ್ಪನೆ (pure concepts)ಗಳಾಗಿದ್ದು ಆಳವಾದ ಅಧ್ಯಯನದ (In-depth) ಅಗತ್ಯವಿದೆ.
9. ಜೆಟ್ ಸ್ಟೀಮ್‌ಗಳಂತಹ ಭೌಗೋಳಿಕ ಪರಿಕಲ್ಪನಾ ಪ್ರಶ್ನೆಗಳನ್ನು ಇನ್ನೂ ಕೇಳಲಾಗುತ್ತಿದೆ.
ಒಟ್ಟಾರೆ ವಿಶ್ಲೇಷಣೆ — ಪ್ರಶ್ನೆ ಪತ್ರಿಕೆ ಕಠಿಣತೆ - ಮಧ್ಯಮ ಕಠಿಣತೆಯಿಂದ ಕಷ್ಟಕರ ಮಟ್ಟದ್ದು.
ಉತ್ತಮ ಪ್ರಯತ್ನ - 65-87 ಪ್ರಶ್ನೆಗಳಿಗೆ ಸರಿ ಉತ್ತರಿಸಿದ್ದಲ್ಲಿ ಅರ್ಹತೆ ಪಡೆಯಬಹುದು.
• ಯುಪಿಎಸ್ಸಿ ಪ್ರಿಲಿಮ್ಸ್ ಪರೀಕ್ಷೆ 2020 ಕಟ್-ಆಫ್ ಬಗ್ಗೆ
━━━━━━━━━━━━━━━━━━━━━
— ಪ್ರಶ್ನೆಪತ್ರಿಕೆಯು ಅಸಾಂಪ್ರದಾಯಿಕ (unconventional)ವಾದ್ದರಿಂದ ಹಿಂದಿನ ವರ್ಷಗಳ ಪತ್ರಿಕೆಗಳಂತೆಯೇ ಇತ್ತು ಈ ವರ್ಷದ ಕಟ್-ಆಫ್ ಕೂಡ ಕಳೆದ ವರ್ಷದಂತೆಯೇ ಇರಬಹುದಾಗಿದೆ.
— ಪ್ರಚಲಿತ ಘಟನೆಗಳಾಧಾರಿತ ಪ್ರಶ್ನೆಗಳು ಪರಿಕಲ್ಪನಾ ಸ್ಪಷ್ಟತೆಯನ್ನು ಬಯಸುವಂಥವು. ಈ ಪ್ರಶ್ನೆಗಳು ನೇರ ಮತ್ತು ವಿಶ್ಲೇಷಣೆಯ ಪ್ರಶ್ನೆಗಳ ಮಿಶ್ರಣವಾಗಿದ್ದು, ಪ್ರಚಲಿತ ಸುದ್ದಿಗಳನ್ನು ಸತತವಾಗಿ ಅನುಸರಿಸಿದವರು ಮಾತ್ರ ಅವುಗಳನ್ನು ಬಿಡಿಸಬಹುದಾಗಿದ್ದವು.
• ಹಿಂದಿನ ವರ್ಷಗಳ ಕಟ್-ಆಫ್
━━━━━━━━━━━━━━
ಸಾಮಾನ್ಯ ವರ್ಗದ ಅಭ್ಯರ್ಥಿಗೆ ಕಟ್-ಆಫ್ ಹೀಗೆ ಇತ್ತು.
ಯುಪಿಎಸ್ಸಿ ಪ್ರಿಲಿಮ್ಸ್ 2019 ರಲ್ಲಿ ▪️98,
ಯುಪಿಎಸ್ಸಿ ಪ್ರಿಲಿಮ್ಸ್ 2018 ರಲ್ಲಿ ▪️98, ಮತ್ತು
ಯುಪಿಎಸ್ಸಿ ಪ್ರಿಲಿಮ್ಸ್ 2017 ರಲ್ಲಿ ▪️105.34.
—ಯುಪಿಎಸ್ಸಿಯು ಪರೀಕ್ಷೆಯನ್ನು ನಡೆಸಿದ 50 ದಿನಗಳಲ್ಲಿ ಪ್ರಿಲಿಮ್ಸ್ ಫಲಿತಾಂಶಗಳನ್ನು ಘೋಷಿಸುತ್ತದೆ.