•► ರಾಷ್ಟ್ರೀಯ ಹಸಿರು ನ್ಯಾಯಮಂಡಳಿ - NGT (IAS / KAS Prelims 2019)
(National Green Tribunal)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಐಎಎಸ್ / ಕೆಎಎಸ್ ಪೂರ್ವಿಭಾವಿ ಪರೀಕ್ಷೆ ತಯಾರಿ
(IAS / KAS Prelims Preparation)
★ ಸಾಮಾನ್ಯ ಅಧ್ಯಯನ ತಯಾರಿ
(General Studies Preparation)
• ಇದು ಪರಿಸರವನ್ನು ರಕ್ಷಣೆಗೆ ಸಂಬಂಧಪಟ್ಟ, ಅರಣ್ಯ ಮತ್ತು ಪ್ರ್ರಾಕೃತಿಕ ಸಂಪನ್ಮೂಲಗಳ ಸಂರಕ್ಷಣೆಗೆ ಸಂಬಂಧಪಟ್ಟ, ಪರಿಸರದ ಬಗೆಗಿನ ಕಾನೂನಾತ್ಮಕ ಹಕ್ಕುಗಳ ಜಾರಿಗೆ ಸಂಬಂಧಪಟ್ಟ ಮತ್ತು ಪರಿಸರ ಹಾನಿಯಿಂದಾಗಿ ಆಸ್ಥಿಪಾಸ್ತಿಗಳ ನಷ್ಟಕ್ಕೆ ಗುರಿಯಾದವರಿಗೆ ಪುನರ್‌ವಸತಿ ಮತ್ತು ಪರಿಹಾರವನ್ನು ಕೊಡುವುದಕ್ಕೆ ಸಂಬಂಧಪಟ್ಟ ಎಲ್ಲಾ ಪ್ರಕರಣಗಳನ್ನು ಇತ್ಯರ್ಥಪಡಿಸುವ ಜವಾಬ್ದಾರಿಯನ್ನು ಹೊಂದಿದೆ.
• ಪರಿಸರಕ್ಕೆ ಸಂಬಂಧಪಟ್ಟ ಪ್ರಕರಣಗಳನ್ನು ತ್ವರಿತವಾಗಿ ಮತ್ತು ಅಗತ್ಯವಿರುವಷ್ಟು ಪರಿಣಿತಿಯಿಂದ ವಿಲೇವಾರಿ ಮಾಡಲೆಂದೇ ಈ ಮಂಡಳಿಯನ್ನು ಸ್ಥಾಪಿಸಲಾಯಿತು.
• ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸ್ಥಾಪನೆಯಾದುದು 2010ರಲ್ಲಿ.
• 2010ರ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕಾಯಿದೆಯನ್ವಯ ಈ ಹಸಿರು ನ್ಯಾಯಮಂಡಳಿಯು ಏರ್ಪಟ್ಟಿದೆ.
• ಇದರ ಮುಖ್ಯ ಕಚೇರಿ ದೆಹಲಿಯಲ್ಲಿ ಇದೆ.
• ಭೋಪಾಲ್, ಪುಣೆ, ಕೋಲ್ಕತ್ತ ಮತ್ತು ಚೆನ್ನೈನಲ್ಲಿ ಪ್ರಾಂತೀಯ ಕೇಂದ್ರಗಳಿವೆ.
• ಈ ನ್ಯಾಯಮಂಡಳಿಯ ಆದೇಶಗಳನ್ನು ಕೇವಲ ಸುಪ್ರೀಂ ಕೋರ್ಟು ಮಾತ್ರ ಬದಲಾಯಿಸಬಲ್ಲದು.
• ಇದರಲ್ಲಿ ಅಧ್ಯಕ್ಷರೂ ಸೇರಿದಂತೆ ಐದು ಮಂದಿ ಸದಸ್ಯರಿದ್ದಾರೆ. ಇವರೆಲ್ಲ ನ್ಯಾಯಮೂರ್ತಿಗಳಾಗಿ ಕೆಲಸ ಮಾಡಿದ ಅನುಭವ ಇರುವವರು. ಜೊತೆಗೆ ಪರಿಸರದ ಬಗ್ಗೆ ವಿಶೇಷ ಪರಿಣತಿ ಇರುವ, ಕಾನೂನು ಬಲ್ಲ ತಜ್ಞರೂ ಇದಕ್ಕೆ ನೆರವಾಗುತ್ತಿದ್ದಾರೆ.
• ಈವರೆಗೆ ಇದ್ದ ಕಾಯಿದೆಯ ಪ್ರಕಾರ ಹಸಿರು ಪೀಠದ ಮುಖ್ಯಸ್ಥರಾಗಿ ಸುಪ್ರೀಂ ಕೋರ್ಟಿನ ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರು ಅಥವಾ ಯಾವುದಾದರೂ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರನ್ನಷ್ಟೆ ನೇಮಿಸಬಹುದಿತ್ತು. ಅರ್ಥಾತ್ ನ್ಯಾಯಿಕ ವಿಚಾರಗಳಲ್ಲಿ ಅನುಭವ ಇರುವವರು ಮಾತ್ರ ಈ ಹುದ್ದೆಯನ್ನು ಪಡೆಯಬಹುದಾಗಿತ್ತು. ಆದರೆ ಹೊಸ ನಿಯಮಾವಳಿಗಳ ಪ್ರಕಾರ ಸುಪ್ರಿಂ ಕೋರ್ಟಿನ ನ್ಯಾಯಾಧೀಶರಾಗುವ ಅರ್ಹತೆ ಪಡೆದ ಯಾರು ಬೇಕಾದರೂ ಪೀಠದ ಮುಖ್ಯಸ್ಥರಾಗಬಹುದು. ಅಂದರೆ ಯಾವುದೇ ಹೈಕೋರ್ಟಿನಲ್ಲಿ 10 ವರ್ಷಗಳ ಕಾಲ ವಕೀಲನಾಗಿ ಸೇವೆ ಸಲ್ಲಿಸುವ ಮೂಲಕ ಸುಪ್ರಿಂ ಕೋರ್ಟಿನ ನ್ಯಾಯಾಧೀಶರಾಗಲು ತಾಂತ್ರಿಕವಾಗಿ ಅರ್ಹತೆ ಪಡೆದ ಯಾರನ್ನು ಬೇಕಾದರೂ ಹಸಿರು ಪೀಠದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಬಹುದು. ಅಲ್ಲದೆ ಈವರೆಗೆ ಹಸಿರು ನ್ಯಾಯಮಂಡಳಿಯ ಇತರ ಸದಸ್ಯರನ್ನು ಸುಪ್ರೀಂ ಕೋರ್ಟಿನ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ನೇಮಕವಾದ ಸಮಿತಿಯು ಆಯ್ಕೆ ಮಾಡುತ್ತಿತ್ತು. ಆದರೆ ಇನ್ನು ಮುಂದೆ ಮಂಡಳಿಯ ಸದಸ್ಯರನ್ನು ಸರ್ಕಾರಿ ಅಧಿಕಾರಿಗಳು ಆಯ್ಕೆ ಮಾಡುತ್ತಾರೆ.
• ಪರಿಸರ ಎನ್ನುವುದು ವಿಶಾಲವ್ಯಾಪ್ತಿಯದು. ಅರಣ್ಯ ಪರಿಸರ, ಜೈವಿಕ ವೈವಿಧ್ಯ, ನೆಲ-ನೀರು-ಬಾನಿನ ಮಾಲಿನ್ಯದ ಮೇಲಿನ ನಿಗಾ, ಸಂಸ್ಥೆಗಳು ಮಾಡುವ ಪರಿಸರ ವಿರೋಧಿ ಚಟುವಟಿಕೆಗಳು- ಇವೆಲ್ಲವನ್ನೂ ನಿಭಾಯಿಸುವುದು ಸುಲಭದ ಮಾತಲ್ಲ. ಎಷ್ಟೋ ವೇಳೆ ಸರ್ಕಾರದ ಕ್ರಮದ ವಿರುದ್ಧವೇ ತೀರ್ಪು ಕೊಡಬೇಕಾಗುತ್ತದೆ. ಇಂಥ ಸಂದರ್ಭಗಳು ಅನೇಕವಿವೆ.
• ಈವರೆಗೆ 25,447 ಮೊಕದ್ದಮೆಗಳನ್ನು ಇತ್ಯರ್ಥ ಮಾಡಿರುವುದು ಈ ಸಂಸ್ಥೆಗಿರುವ ಜವಾಬ್ದಾರಿಯ ಸಂಕೇತ.