"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday, 2 September 2018

☀ ಪತ್ರಿಕೆ 2 ಸಾಮಾನ್ಯ ಅಧ್ಯಯನ 1— ಸಾವರಿನ್‌ ಕ್ರೆಡಿಟ್‌ ರೇಟಿಂಗ್ ಎಂದರೇನು‌? ಇದನ್ನು ಹೇಗೆ ನಿರ್ಣಯಿಸಲಾಗುತ್ತದೆ? ಪ್ರಮುಖ ರೇಟಿಂಗ್‌ ಏಜೆನ್ಸಿಗಳು - ದೇಶವೊಂದರ ಆರ್ಥಿಕ ಸ್ಥಿತಿಗತಿ ನಿರ್ಧರಿಸುವಲ್ಲಿ ಇದರ ಮಹತ್ವ. (Sovereign Credit Rating - How it will be Determined - Famous Credit Rating Agencies - Its Importance)

 ☀ ಪತ್ರಿಕೆ 2 ಸಾಮಾನ್ಯ ಅಧ್ಯಯನ 1— ಸಾವರಿನ್‌ ಕ್ರೆಡಿಟ್‌ ರೇಟಿಂಗ್ ಎಂದರೇನು‌? ಇದನ್ನು ಹೇಗೆ ನಿರ್ಣಯಿಸಲಾಗುತ್ತದೆ? ಪ್ರಮುಖ ರೇಟಿಂಗ್‌ ಏಜೆನ್ಸಿಗಳು - ದೇಶವೊಂದರ ಆರ್ಥಿಕ ಸ್ಥಿತಿಗತಿ ನಿರ್ಧರಿಸುವಲ್ಲಿ ಇದರ ಮಹತ್ವ.
(Sovereign Credit Rating - How it will be Determined - Famous Credit Rating Agencies - Its Importance)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ
(General Studies)


★ ಸಾಮಾನ್ಯ ಅರ್ಥಶಾಸ್ತ್ರ
(General Economy)




●.ಕ್ರೆಡಿಟ್‌ ಅಂದರೆ ಸಾಲ. ಸಾವರಿನ್‌ ಅಂದರೆ ಸಾರ್ವಭೌಮ ಅಥವಾ ಅದು ಒಂದು ದೇಶದ ಬಗ್ಗೆ ಬಳಸುವ ಪದ. ಹಾಗಾಗಿ ಸಾವರಿನ್‌ ಕ್ರೆಡಿಟ್‌ ರೇಟಿಂಗ್‌ ಎನ್ನುವುದು ಒಂದು ದೇಶದ ಸಾಲಾರ್ಹತೆಯ ಬಗ್ಗೆ ನೀಡುವ ಅಂಕ ಅಥವಾ ರೇಟಿಂಗ್‌. ಸಾಲ ಪಡೆಯಲು ಉಳ್ಳ ಅರ್ಹತೆ ಅಥವಾ ಸಾಲ ಪಡಕೊಂಡು ಅದನ್ನು ಮರುಪಾವತಿ ಮಾಡುವ ಶಕ್ತಿಯೇ ಸಾಲಾರ್ಹತೆ. ಈ ರೇಟಿಂಗ್‌ ಮೂಲಕ ಪ್ರತಿಯೊಂದು ದೇಶದ ಸಾಲ ಮರುಪಾವತಿ ಮಾಡುವ ಶಕ್ತಿಯ ಬಗ್ಗೆ ವ್ಯಾಖ್ಯಾನ ನಡೆಯುತ್ತದೆ.

- ಈ ರೀತಿ ರೇಟಿಂಗ್‌ ನೀಡುವ ಸಂಸ್ಥೆಗಳನ್ನು ಕ್ರೆಡಿಟ್‌ ರೇಟಿಂಗ್‌ ಏಜೆನ್ಸಿ ಎಂದು ಕರೆಯುತ್ತಾರೆ. ಮುಖ್ಯವಾಗಿ ಮೂಡೀಸ್‌, ಸ್ಟಾಂಡರ್ಡ್‌ ಐನ್ಡ್ ಪುವರ್‌ ಮತ್ತು ಫಿಚ… ಎಂಬ ಸಂಸ್ಥೆಗಳು ಜಾಗತಿಕ ಮಟ್ಟದಲ್ಲಿ ಈ ಕೆಲಸವನ್ನು ಮಾಡುತ್ತವೆ ಮತ್ತು ಅವುಗಳ ರೇಟಿಂಗ… ಅಂಕಗಳು ಬಹಳಷ್ಟು ಮಹತ್ವವುಳ್ಳದ್ದು ಆಗಿರುತ್ತವೆ. ಬೇರೆ ಇನ್ನಿತರ ಚಿಕ್ಕಪುಟ್ಟ ರೇಟಿಂಗ… ಸಂಸ್ಥೆಗಳು ಇದ್ದರೂ ಈ ಮೂರು ಸಂಸ್ಥೆಗಳು ಜಾಗತಿಕ ಮಟ್ಟದಲ್ಲಿ ಬಹುತೇಕ ಶೇ.90% ಕ್ಕೂ ಮೀರಿದ ಸಂದರ್ಭಗಳಲ್ಲಿ ರೇಟಿಂಗ್‌ ನೀಡುತ್ತಿವೆ.



●.ರೇಟಿಂಗ್‌ ನಿರ್ಣಯ :
━━━━━━━━━━━━━

ಒಬ್ಟಾತ ಸಾಲಗಾರನಿಗೆ ಸಾಲ ನೀಡಬೇಕೇ ಬೇಡವೇ ಎನ್ನುವುದನ್ನು ಆತನ ಆರ್ಥಿಕ ಸ್ಥಿತಿಗತಿ ಮತ್ತು ಆತನ ಒಟ್ಟಾರೆ ವಿತ್ತೀಯ ಶಿಸ್ತನ್ನು ನೋಡಿ ನಿರ್ಣಯ ಮಾಡುವ ಹಾಗೆಯೇ ಒಂದು ದೇಶದ ಸಾವರಿನ್‌ ಕ್ರೆಡಿಟ… ರೇಟಿಂಗ್‌ ಮಾಡುವಾಗಲೂ ಆ ದೇಶದ ಆರ್ಥಿಕ ಸ್ಥಿತಿಗತಿ ಮತ್ತು ಶಿಸ್ತನ್ನು ನೋಡಿಕೊಂಡು ಮಾಡಲಾಗುತ್ತದೆ.   

- ಒಂದು ದೇಶದ ಒಟ್ಟಾರೆ ಸದ್ಯದ ಒಟ್ಟಾರೆ ಸಾಲ, ಒಟ್ಟು ಜಿಡಿಪಿ ಅಥವಾ ಆದಾಯ, ಅದರ ಬೆಳವಣಿಗೆಯ ಪ್ರಮಾಣ, ಹಣದುಬ್ಬರ, ವಿದೇಶಿ ವಿನಿಮಯ ಇತ್ಯಾದಿ ಹತ್ತು ಹಲವು ಆರ್ಥಿಕ ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ರೇಟಿಂಗ್‌ ಅನ್ನು ಕೊಡಲಾಗುತ್ತದೆ. ಅಷ್ಟೇ ಅಲ್ಲ, ದೇಶದ ರಾಜಕೀಯ ಸ್ಥಿರತೆ ಅಥವಾ ಪೊಲಿಟಿಕಲ… ಸ್ಟೆಬಿಲಿಟಿಯನ್ನೂ ಕೂಡಾ ಈ ಸಂಸ್ಥಗಳು ಗಮನಕ್ಕೆ ತೆಗೆದುಕೊಳ್ಳುತ್ತವೆ.

ಈ ಎಲ್ಲಾ ಅಂಶಗಳನ್ನು ಒಳಗೊಂಡಂತೆ ಈ ಸಂಸ್ಥೆಗಳು ತಮ್ಮದೇ ಆದ ಪ್ರಶ್ನಾವಳಿಯನ್ನು ತುಂಬಿ ಅವಕ್ಕೆ ಅಂಕಗಳನ್ನು ನೀಡಿ ಅಂತಿಮ ರೇಟಿಂಗ್‌ ಅನ್ನು ಸಿದ್ಧಗೊಳಿಸುತ್ತವೆ. ಇದು ಸಾಮಾನ್ಯ ವಿಧಾನ.



●.ಮುನ್ನೋಟ :
━━━━━━━━━━

- ಸ್ಟಾಂಡರ್ಡ… ಐನ್ಡ್ ಪುವರ್‌ ಸಂಸ್ಥೆಯ ರೇಟಿಂಗ್‌ಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದರಲ್ಲಿ ಪ್ರತಿಯೊಂದು ರೇಟಿಂಗ್‌ ಅಂಕಿಯ ಕೊನೆಗೂ  + , - ಅಥವಾ ಅವೆರಡೂ ಇಲ್ಲದ ಸಂದರ್ಭಗಳು ಇರುತ್ತವೆ. ಉದಾ: ಅ ರೇಟಿಂಗ್‌ ಅನ್ನು ತೆಗೆದುಕೊಂಡರೆ, ಅಲ್ಲಿ ಅ, ಅ+ ಮತ್ತು ಆ- ಅನ್ನು ಕಾಣಬಹುದು. ಈ ಪ್ಲಸ್‌ ಮತ್ತು ಮೈನಸ್‌ ಚಿನ್ಹೆಗಳು ಔಟ್‌ಲುಕ್‌ ಅಥವಾ ಮುನ್ನೋಟವನ್ನು ಸೂಚಿಸುತ್ತದೆ. ಅ ಪ್ಲಸ್‌ ಅಂದರೆ ಇದು ಭವಿಷ್ಯದಲ್ಲಿ ಅಭಿವೃದ್ಧಿ ಹೊಂದುವ ಲಕ್ಷ$ಣವನ್ನು ಸೂಚಿಸುತ್ತದೆ. ಅ  ಅಂದರೆ ಅದು ಭವಿಷ್ಯತ್ತಿನಲ್ಲಿ ಇನ್ನಷ್ಟು ಶಿಥಿಲವಾಗುವ ಲಕ್ಷಣ. ಅವೆರಡೂ ಅಲ್ಲದೆ ಬರೇ ಅ ಎಂಬ ರೇಟಿಂಗ್‌ ಇದ್ದರೆ ನ್ಯೂಟ್ರಲ… ಅಥವಾ ಭವಿಷ್ಯತ್ತಿನಲ್ಲಿ ಅದು ಹಾಗೆಯೇ ಮುಂದುವರಿಯುವ ಲಕ್ಷಣ ಇದೆಯೆಂದರ್ಥ. ಈ ಪ್ಲಸ್‌-ಮೈನಸ್‌ ಚಿನ್ಹೆಗಳನ್ನು ಪ್ರತ್ಯೇಕವಾಗಿಯೂ ಕೂಡಾ ಔಟ್‌ಲುಕ್‌ ಎಂದು ನಮೂದಿಸಬಹುದು. 



●.ಪ್ರಮುಖ ರೇಟಿಂಗ್‌ ಏಜೆನ್ಸಿಗಳು :
━━━━━━━━━━━━━━━━━━━━

ಮೂರೂ ಜನಪ್ರಿಯ ರೇಟಿಂಗ್‌ ಏಜೆನ್ಸಿಗಳಾದ ಮೂಡೀಸ್‌, ಸ್ಟಾಂಡರ್ಡ್‌ ಐನ್ಡ್ ಪುವರ… ಹಾಗೂ ಫಿಚ್‌ ಸಂಸ್ಥೆಗಳು ಸರಿ ಸುಮಾರಾಗಿ ಅ, ಆ ಮತ್ತು ಇ ಅಕ್ಷರಗಳನ್ನೂ ಮೂಲವಾಗಿ ಉಪಯೋಗಿಸಿಕೊಂಡರೂ ಅವುಗಳ ರೇಟಿಂಗ್‌ ನಾಮಾವಳಿಯಲ್ಲಿ ತುಸು ವ್ಯತ್ಯಾಸಗಳಿವೆ.

- ಮೂಡೀಸ್‌ ಪ್ರಕಾರ BAAA3 ಯಾ BAAA2  ಅಂದರೆ ಭಾರತವು ಕೆಳಮಧ್ಯಮ ತರಗತಿಯ ಸಾಲಾರ್ಹತೆಯುಳ್ಳ ಒಂದು ದೇಶ. ಅದುವೇ ಸ್ಟಾಂಡರ್ಡ… ಐನ್ಡ್ ಪುವರ… ಸಂಸ್ಥೆಯ ಪ್ರಕಾರ ಆಆಆ  ಆಗಿದೆ. ರೇಟಿಂಗ್‌ ಹೆಸರಿನಲ್ಲಿ ಸ್ವಲ್ಪ ವ್ಯತ್ಯಾಸವಿದ್ದರೂ ಅರ್ಥದಲ್ಲಿ ಅವು ಸರಿಸುಮಾರು ಒಂದೇ ತರಗತಿಗೆ ಸೇರಿವೆ. ಇನ್ನೂ ಕೆಳಕ್ಕೆ ಇಳಿದರೆ ಅಪಾಯ ಮತ್ತು ಹೂದಿಕೆಗೆ ಅನರ್ಹವಾದ ತರಗತಿಗಳಿವೆ. ಸದ್ಯಕ್ಕೆ ಭಾರತ ದೇಶವು ಅಂತಹ ಅಪಾಯ ಪಂಕ್ತಿಯಿಂದ ಮೇಲೆಯೇ ಇದೆ. ಜಗತ್ತಿನಾದ್ಯಂತ ಹಲವು ದೇಶಗಳು ಡೇಂಜರ್‌ ಮತ್ತು ಜಂಕ್‌ ತರಗತಿಯಲ್ಲಿ ತೊಳಲಾಡುತ್ತಿವೆ ಎನ್ನುವುದನ್ನೂ ನಾವು ಗಮನದಲ್ಲಿ ಇಟ್ಟುಕೊಳ್ಳಬೆಕು.



●.ಮಹತ್ವ:
━━━━━━━━

ಒಂದು ದೇಶದ ಸಾವರಿನ್‌ ಕ್ರೆಡಿಟ್ ರೇಟಿಂಗ್‌ ಆ ದೇಶದ ಸಾಲಾರ್ಹತೆಯನ್ನು ಸೂಚಿಸುತ್ತದೆ. ರೇಟಿಂಗ್‌ ಉತ್ತಮವಾಗಿದ್ದರೆ ಆ ದೇಶಕ್ಕೆ ನೀಡಿದ ಸಾಲದ ಅಸಲು ಹಾಗೂ ಬಡ್ಡಿ ಕ್ಲಪ್ತ ಸಮಯಕ್ಕೆ ವಾಪಾಸು ಪಡೆಯುವ ಭರವಸೆಯನ್ನು ಇಟ್ಟುಕೊಳ್ಳಬಹುದು. ಒಂದು ವೇಳೆ ರೇಟಿಂಗ್‌ ಕಳಪೆಯಾಗಿದ್ದರೆ ಅಸಲು ಮತ್ತು ಬಡ್ಡಿ ವಾಪಾಸು ಬರುವುದು ಸಂಶಯವೇ ಸರಿ. ಈ ಕಾರಣಕ್ಕಾಗಿ ಜಗತ್ತಿನಾದ್ಯಂತ ವಿತ್ತೀಯ ಸಂಸ್ಥೆಗಳು ಮತ್ತು ಸರಕಾರಗಳು ಸಾಲಗಾರ ಸರಕಾರದ ಸವೆರಿನ್‌ ರೇಟಿಂಗ್‌ ಅನ್ನು ಸೂಕ್ಷ್ಮವಾಗಿ ಗಮನಿಸುತ್ತದೆ.

- ರೇಟಿಂಗ್‌ ಉತ್ತಮವಾಗಿದ್ದರೆ ಯಾರಾದರೂ ಅಂತಹ ದೇಶಕ್ಕೆ ಸಾಲ ನೀಡಲು ಮುಂದೆ ಬಂದಾರು. ವರ್ಲ್ಡ್ ಬ್ಯಾಂಕ್‌, ಇಂಟರ್‌ನ್ಯಾಷನಲ… ಮಾನೆಟರಿ ಫ‌ಂಡ್‌ ಅಥವಾ ಅಮೆರಿಕಾ, ಜಪಾನ್‌ ನಂತಹ ದೇಶಗಳು ಸಾಲ ನೀಡಲು ಉತ್ಸಾಹ ತೋರಿಸಿಯಾವು. ಆರ್ಥಿಕವಾಗಿ ಸದೃಡವಾಗಿ ಉಳ್ಳ ಯಾವ ದೇಶಕ್ಕೆ ತಾನೇ ಸಾಲ ಸಿಕ್ಕದೆ ಇರಬಹುದು? ಅಂತಹ ವಾತಾವರಣದಲ್ಲಿ ಸಾಲ ಪಡೆಯುವ ದೇಶಕ್ಕೆ ಸಾಕಷ್ಟು ಮೊತ್ತದಲ್ಲಿ ಸಾಲ ದೊರಕೀತು ಹಾಗೂ ಅದು ಕಡಿಮೆ ಬಡ್ಡಿ ದರದಲ್ಲಿಯೂ ದೊರಕೀತು. ಮರುಪಾವತಿಯ ಖಾತ್ರಿಯಿದ್ದರೆ ಸಾಲದ ಮೇಲಿನ ಬಡ್ಡಿ ದರವನ್ನು ಚೌಕಾಶಿ ಮಾಡಿ ಇಳಿಸಿಕೊಳ್ಳಬಹುದಲ್ಲವೆ? ಈ ರೀತಿ ಬೇಕಾದಷ್ಟು ದುಡ್ಡು ಸಾಲದ ರೂಪದಲ್ಲಿ ಕಡಿಮೆ ಬಡ್ಡಿ ದರಕ್ಕೆ ದೊರಕಿದರೆ ಆ ದೇಶದ ಅಭಿವೃದ್ಧಿ ಸುಲಭವಾದೀತು.

- ಈ ಕಾರಣಕ್ಕಾಗಿಯೇ ಕ್ರೆಡಿಟ್ ರೇಟಿಂಗ್‌ ಉತ್ತಮವಾದೊಡನೆ ಆ ದೇಶದ ಶೇರು ಮಾರುಕಟ್ಟೆ ಹಾಗೂ ಸಾಲಪತ್ರಗಳ ಬಾಂಡು ಮಾರುಗಟ್ಟೆ ಏರುಗತಿಯನ್ನು ಕಾಣುತ್ತದೆ. ಬದಲಾಗಿ ಕ್ರೆಡಿಟ್ ರೇಟಿಂಗ್ ಕಳಪೆಯಾದರೆ ಆ ದೇಶಕ್ಕೆ ಸಾಲ ಸಿಕ್ಕುವುದು ದುರ್ಲಭವಾಗಬಹುದು ಮತ್ತು ಸಿಕ್ಕರೂ ಜಾಸ್ತಿ ಬಡ್ಡಿದರ ತೆರಬೇಕಾಗಿ ಬರಬಹುದು. ಅಂತಹ ಸಂದರ್ಭಗಳಲ್ಲಿ ಆ ದೇಶದ ಅಭಿವೃದ್ದಿ ಕುಂಠಿತವಾಗಬಹುದು. ಆ ಕಾರಣಕ್ಕಾಗಿ ಅಲ್ಲಿನ ಶೇರು ಮಾರುಗಟ್ಟೆ ಮತ್ತು ಸಾಲಪತ್ರಗಳ ಬಾಂಡು ಮಾರುಗಟ್ಟೆ ಕುಸಿಯುತ್ತದೆ. ಇದು ಕ್ರೆಡಿಟ್ ರೇಟಿಂಗ್ ಹಾಗೂ ಮಾರುಗಟ್ಟೆಯ ಏರಿಳಿತದ ಹಿಂದಿರುವ ಸರಳವಾದ ತರ್ಕ.

(Courtesy : Vijayavani)

No comments:

Post a Comment