☀️ 'ಕೊಲಿಜಿಯಮ್' ಎಂದರೇನು? 'ಕೊಲಿಜಿಯಮ್' ಹೇಗೆ ಕೆಲಸ ಮಾಡುತ್ತದೆ? ಯಾಕೆ ಟೀಕೆ?
(What is 'colligium'? How does 'colligium' work? Why criticism?)
━━━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಭಾರತದ ಸಂವಿಧಾನ
(Indian Constitution)
★ ಸಾಮಾನ್ಯ ಅಧ್ಯಯನ ಪತ್ರಿಕೆ 3
(General Studies Paper III)
•► 'ಕೊಲಿಜಿಯಮ್' :
ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡಲು ಇರುವ ವ್ಯವಸ್ಥೆಯನ್ನು ಕೊಲಿಜಿಯಮ್ ಸಿಸ್ಟಮ್(ನ್ಯಾಯಮೂರ್ತಿಗಳ ನೇಮಕಾತಿ ಸಮಿತಿ) ಎಂದು ಕರೆಯಲಾಗುತ್ತದೆ. 1990ರ ದಶಕದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಎರಡು ತೀರ್ಪುಗಳನ್ನು ಆಧರಿಸಿ ಕೊಲಿಜಿಯಮ್ ವ್ಯವಸ್ಥೆ ಜಾರಿಯಲ್ಲಿದೆ.
•► ಈ ವ್ಯವಸ್ಥೆಗೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮುಖ್ಯಸ್ಥರಾಗಿರುತ್ತಾರೆ. ಅವರ ನೇತೃತ್ವದ ಸಮಿತಿಯು, ವ್ಯಕ್ತಿಗಳನ್ನು ಆಯ್ಕೆ ಮಾಡುತ್ತದೆ ಮತ್ತು ಅವರನ್ನು ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ಸರಕಾರಕ್ಕೆ ಶಿಫಾರಸು ಮಾಡುತ್ತದೆ. ಈ ಕೊಲಿಜಿಯಮ್ ವ್ಯವಸ್ಥೆಗೆ 25 ವರ್ಷಗಳ ಇತಿಹಾಸವಿದ್ದು, ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕ ಹಾಗೂ ವರ್ಗಾವಣೆಯ ಪ್ರಕ್ರಿಯೆಯನ್ನು ಕೈಗೊಳ್ಳುತ್ತದೆ.
•► ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಐವರು ಅತ್ಯಂತ ಹಿರಿಯ ನ್ಯಾಯಮೂರ್ತಿಗಳು ಇರುವ ಈ ಸಮಿತಿಯು ಪರೀಕ್ಷೆಗೊಳಪಡಿಸುತ್ತದೆ. ಹಾಗೆಯೇ ಇದೇ ಸಮಿತಿ, ಈಗಾಗಲೇ ಸೇವೆಯಲ್ಲಿರುವ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ನ್ಯಾಯಮೂರ್ತಿಗಳ ಮೌಲ್ಯಮಾಪನ ಮಾಡಿ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ಶಿಫಾರಸು ಮಾಡುತ್ತದೆ.
•► ಕೊಲಿಜಿಯಮ್ ಬಲಪಡಿಸಿದ ತೀರ್ಪುಗಳು :
- 1981ರ ಎಸ್‌ಪಿ ಗುಪ್ತಾ ವರ್ಸಸ್ ಯೂನಿಯನ್ ಆಫ್ ಇಂಡಿಯಾ(ಇದು ಮೊದಲನೆಯ ಜಜ್ ಕೇಸ್)
- 1993ರ ಸುಪ್ರೀಂ ಕೋರ್ಟ್ ಅಡ್ವೋಕೇಟ್ಸ್ ಆನ್ ರೆಕಾರ್ಡ್ ಅಸೋಸಿಯೇಷನ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ(ಇದು ಎರಡನೇ ಜಜ್ ಕೇಸ್)
- ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆ 'ಸಮಾಲೋಚನೆ' ನಿರ್ಧಾರ ಬಗ್ಗೆ ವಿವಾದ ಉಂಟಾಗಿತ್ತು. 1998ರಲ್ಲಿ ಈ ಬಗ್ಗೆ ಸುಪ್ರೀಂ ಕೋರ್ಟ್ ಸ್ಪಷ್ಟ ಮಾರ್ಗದರ್ಶಿ ಸೂತ್ರವನ್ನು ನೀಡಿತ್ತು. ಅದರನ್ವಯ ಸುಪ್ರೀಂ ಕೋರ್ಟ್ ನೇಮಕಕ್ಕೆ ಸಂಬಂಧಪಟ್ಟಂತೆ ಸಿಜೆಐ ಹಾಗೂ ನಾಲ್ವರು ಅತ್ಯಂತ ಹಿರಿಯ ನ್ಯಾಯಮೂರ್ತಿಗಳು ಹಾಗೂ ಹೈಕೋರ್ಟ್ ನೇಮಕಕ್ಕೆ ಸಂಬಂಧಿಸಿ ಇಬ್ಬರ ನ್ಯಾಯಮೂರ್ತಿಗಳ ಜತೆಗೆ 'ಸಮಾಲೋಚನೆ' ಮಾಡಬೇಕು. ಒಂದು ವೇಳೆ, ಇಷ್ಟು ಜನರ ಪೈಕಿ ಇಬ್ಬರು ನ್ಯಾಯಮೂರ್ತಿಗಳು ಭಿನ್ನಾಭಿಪ್ರಾಯ ತಳೆದರೆ, ಸಿಜೆಐ ತಮ್ಮ ಶಿಫಾರಸನ್ನು ಸರಕಾರಕ್ಕೆ ಸಲ್ಲಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸೂಚಿಸಿದ ಮಾರ್ಗದರ್ಶಿ ಸೂತ್ರದಲ್ಲಿ ತಿಳಿಸಲಾಗಿದೆ.
•► ಯಾಕೆ ಟೀಕೆ?
- ಕೊಲಿಜಿಯಮ್‌ನಲ್ಲಿ ಪಾರದರ್ಶಕತೆ ಕೊರತೆ
- ಉತ್ತರದಾಯಿತ್ವ ಇಲ್ಲದಿರುವುದು
ಹೊಸ ವ್ಯವಸ್ಥೆಯ ತುಡಿತ
- ಜಸ್ಟಿಸ್ ಎಂ.ಎನ್.ವೆಂಕಟಾಚಲಯ್ಯ ಕಮಿಷನ್: ಈ ಹಿಂದಿನ ಎನ್‌ಡಿಎ ಸರಕಾರ ಈ ಆಯೋಗವನ್ನು ನೇಮಕ ಮಾಡಿತ್ತು. ಕೊಲಿಜಿಯಮ್ ವ್ಯವಸ್ಥೆಗೆ ಬದಲಿಯಾಗಿ 'ನ್ಯಾಷನಲ್ ಜುಡಿಷಿಯಲ್ ಅಪಾಯಿಂಟ್‌ಮೆಂಟ್ಸ್ ಕಮಿಷನ್(ಎನ್‌ಜೆಎಸಿ)' ರಚನೆ ಬಗ್ಗೆ ಆಯೋಗ ಒಲವು ತೋರಿತ್ತು. ಈ ಆಯೋಗಕ್ಕೆ ಸಿಜೆಐ, ಇಬ್ಬರು ಅತ್ಯಂತ ಹಿರಿಯ ನ್ಯಾಯಮೂರ್ತಿಗಳು, ಕಾನೂನು ಸಚಿವರು ಹಾಗೂ ಸಿಜೆಐ ಜತೆ ಸಮಾಲೋಚಿಸಿ ರಾಷ್ಟ್ರಪತಿಯಿಂದ ನೇಮಕಗೊಳ್ಳುವ ಸಾರ್ವಜನಿಕ ವಲಯದ ಗಣ್ಯ ವ್ಯಕ್ತಿ ಸದಸ್ಯರಾಗಬೇಕು ಎಂದು ಅದು ಶಿಫಾರಸು ಮಾಡಿತ್ತು.
- 2015ರ ಮೇನಲ್ಲಿ ಎನ್‌ಜೆಎಸಿ ರಚನೆ ಅಸಾಂವಿಧಾನಿಕ ಎಂದು ಐವರು ನ್ಯಾಯಮೂರ್ತಿಗಳಿದ್ದ ಸಾಂವಿಧಾನಿಕ ಪೀಠ ಹೇಳಿತು.
- ಆದರೆ, ಆಸಕ್ತಿಕರ ವಿಷಯ ಎಂದರೆ, 'ನ್ಯಾಯಮೂರ್ತಿಗಳೇ ನ್ಯಾಯಮೂರ್ತಿಗಳನ್ನು ನೇಮಕ' ಮಾಡುವ ಕೊಲಿಜಿಯಂ ವ್ಯವಸ್ಥೆಯಲ್ಲಿ ಎಲ್ಲವೂ ಸರಿ ಇಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತ್ತು. ನ್ಯಾಯಾಂಗ ನೇಮಕಗಳನ್ನು ಮಾಡುವ 21 ವರ್ಷದ ಈ ವ್ಯವಸ್ಥೆಯನ್ನು ಸುಧಾರಿಸಬೇಕಾದ ಅಗತ್ಯವಿದೆ ಎಂದೂ ಹೇಳಿತ್ತು.

Thanks ... good info... while browsing multiple groups I found this message and felt this might add value to readers...
ReplyDeletePrevious year solved question papers -
Exams Year
IAS 2014, 2013, 2012, 2011, 2010
KAS 2017(2 papers), 2015(2 papers), 2012(2 papers), 2010, 2008, 2006, 2005, 1999, 1998
Police Exams 2016, 2015, 2014(2), 2013, 2012, 2009, 2008, 2007, 2005, 2003, 2002, 2000, 1998
SDA (General Science & General Kannada ) 2011, 2009, 2008, 2006, 1998, 1991
FDA (General Science & General Kannada ) 2011, 2009, 2008, 2005, 1997, 1991
Available @ http://exams.m-swadhyaya.com/
Other question papers
ಇತಿಹಾಸ - 22 ಪರೀಕ್ಷೆಗಳು (1200 ಪ್ರಶ್ನೆಗಳು)
ಸಾಮಾನ್ಯ ಕಂಪ್ಯೂಟರ್ ಜ್ಯ್ನಾನ -10 ಪರೀಕ್ಷೆಗಳು (500 ಪ್ರಶ್ನೆಗಳು)
ಭಾರತೀಯ ರಾಜಕೀಯ ವ್ಯವಸ್ಥೆ -9 ಪರೀಕ್ಷೆಗಳು (450 ಪ್ರಶ್ನೆಗಳು)
ಭೂಗೋಳ -9 ಪರೀಕ್ಷೆಗಳು (450 ಪ್ರಶ್ನೆಗಳು)
ವಿಜ್ಞಾನ ಮತ್ತು ತಂತ್ರಜ್ಞಾನ - 8 ಪರೀಕ್ಷೆಗಳು (400 ಪ್ರಶ್ನೆಗಳು)
ಆರ್ಥಿಕತೆ -4 ಪರೀಕ್ಷೆಗಳು (200 ಪ್ರಶ್ನೆಗಳು)
ಮಾನಸಿಕ ಸಾಮರ್ಥ್ಯ -1 ಪರೀಕ್ಷೆ (50 ಪ್ರಶ್ನೆಗಳು)
ಆನ್ಲೈನ್ ಮತ್ತು ಕ್ವಿಜ್ ಮೋಡ್ನಲ್ಲಿ ಪ್ರಶ್ನೆಗಳನ್ನು ವಿಭಜಿಸಲಾಗಿದೆ ಎಂಬುದನ್ನು ದಯವಿಟ್ಟು ಗಮನಿಸಿ
ಕ್ವಿಜ್ ಮೋಡ್ - ನೀವು ಆಯ್ಕೆಯನ್ನು ಕ್ಲಿಕ್ ಮಾಡಿದ ಕ್ಷಣದಲ್ಲಿ ನೀವು ಸರಿಯಾದ ಉತ್ತರವನ್ನು ಪಡೆಯುತ್ತೀರಿ
ಆನ್ಲೈನ್ ಪರೀಕ್ಷೆ - ನೀವು ಪರೀಕ್ಷೆಗಳನ್ನು ಪೂರ್ಣಗೊಳಿಸುವ ತನಕ ಸರಿಯಾದ ಉತ್ತರಕ್ಕಾಗಿ ನೀವು ನಿರೀಕ್ಷಿಸಬೇಕಾಗಿದೆ
ನಾವು ಪ್ರಸ್ತುತ ದಿನಕ್ಕೆ 2-3 ಪ್ರಶ್ನೆ ಬ್ಯಾಂಕುಗಳನ್ನು ಸೇರಿಸುತ್ತೇವೆ, ಭೇಟಿ ನೀಡಿ ಮತ್ತು ಪರೀಕ್ಷೆಗಳಿಗೆ ತಯಾರಿ ಜರಿ ಇಡಿ
ಉಚಿತ ಕನ್ನಡ ನೋಟ್ಸ್ ಈ ಲಿಂಕಿನಲ್ಲಿ ಲಭ್ಯ
http://www.m-swadhyaya.com/index/edfeed
ಉಚಿತ ವಿಷಯವರು ಪರೀಕ್ಷೆಗಳು ಈ ಲಿಂಕಿನಲ್ಲಿ ಲಭ್ಯ
http://exams.m-swadhyaya.com
ಇವೆಲ್ಲವೂ ಉಚಿತ ಅಪ್ಲಿಕೇಶನ್ ಮೂಲಕ ಲಭ್ಯ, ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ -
http://bit.ly/swadhyaya-app
ಸ್ವಧ್ಯಾಯ ತಂಡದ ಬಗ್ಗೆ ಹೆಚ್ಚಿನ ವಿವರಗಳಿಗಾಗಿ :
YouTube : http://bit.ly/swadhyaya-youtube
Facebook : http://bit.ly/swadhyaya-fb
Website : http://m-swadhyaya.com/