"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday, 26 January 2018

☀️ 'ಕೊಲಿಜಿಯಮ್' ಎಂದರೇನು? 'ಕೊಲಿಜಿಯಮ್'‌ ಹೇಗೆ ಕೆಲಸ ಮಾಡುತ್ತದೆ? ಯಾಕೆ ಟೀಕೆ? (What is 'colligium'? How does 'colligium' work? Why criticism?)

☀️ 'ಕೊಲಿಜಿಯಮ್' ಎಂದರೇನು?  'ಕೊಲಿಜಿಯಮ್'‌ ಹೇಗೆ ಕೆಲಸ ಮಾಡುತ್ತದೆ? ಯಾಕೆ ಟೀಕೆ?
(What is 'colligium'? How does 'colligium' work? Why criticism?)
━━━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಭಾರತದ ಸಂವಿಧಾನ
(Indian Constitution)

★ ಸಾಮಾನ್ಯ ಅಧ್ಯಯನ ಪತ್ರಿಕೆ 3
(General Studies Paper III)



•► 'ಕೊಲಿಜಿಯಮ್' :

ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡಲು ಇರುವ ವ್ಯವಸ್ಥೆಯನ್ನು ಕೊಲಿಜಿಯಮ್‌ ಸಿಸ್ಟಮ್‌(ನ್ಯಾಯಮೂರ್ತಿಗಳ ನೇಮಕಾತಿ ಸಮಿತಿ) ಎಂದು ಕರೆಯಲಾಗುತ್ತದೆ. 1990ರ ದಶಕದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ಎರಡು ತೀರ್ಪುಗಳನ್ನು ಆಧರಿಸಿ ಕೊಲಿಜಿಯಮ್‌ ವ್ಯವಸ್ಥೆ ಜಾರಿಯಲ್ಲಿದೆ.

•► ಈ ವ್ಯವಸ್ಥೆಗೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮುಖ್ಯಸ್ಥರಾಗಿರುತ್ತಾರೆ. ಅವರ ನೇತೃತ್ವದ ಸಮಿತಿಯು, ವ್ಯಕ್ತಿಗಳನ್ನು ಆಯ್ಕೆ ಮಾಡುತ್ತದೆ ಮತ್ತು ಅವರನ್ನು ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ಸರಕಾರಕ್ಕೆ ಶಿಫಾರಸು ಮಾಡುತ್ತದೆ. ಈ ಕೊಲಿಜಿಯಮ್‌ ವ್ಯವಸ್ಥೆಗೆ 25 ವರ್ಷಗಳ ಇತಿಹಾಸವಿದ್ದು, ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ ನ್ಯಾಯಮೂರ್ತಿಗಳ ನೇಮಕ ಹಾಗೂ ವರ್ಗಾವಣೆಯ ಪ್ರಕ್ರಿಯೆಯನ್ನು ಕೈಗೊಳ್ಳುತ್ತದೆ.

•► ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಐವರು ಅತ್ಯಂತ ಹಿರಿಯ ನ್ಯಾಯಮೂರ್ತಿಗಳು ಇರುವ ಈ ಸಮಿತಿಯು ಪರೀಕ್ಷೆಗೊಳಪಡಿಸುತ್ತದೆ. ಹಾಗೆಯೇ ಇದೇ ಸಮಿತಿ, ಈಗಾಗಲೇ ಸೇವೆಯಲ್ಲಿರುವ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹಾಗೂ ನ್ಯಾಯಮೂರ್ತಿಗಳ ಮೌಲ್ಯಮಾಪನ ಮಾಡಿ ಅವರನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ಶಿಫಾರಸು ಮಾಡುತ್ತದೆ.



•► ಕೊಲಿಜಿಯಮ್‌ ಬಲಪಡಿಸಿದ ತೀರ್ಪುಗಳು :

- 1981ರ ಎಸ್‌ಪಿ ಗುಪ್ತಾ ವರ್ಸಸ್‌ ಯೂನಿಯನ್‌ ಆಫ್‌ ಇಂಡಿಯಾ(ಇದು ಮೊದಲನೆಯ ಜಜ್‌ ಕೇಸ್‌)

- 1993ರ ಸುಪ್ರೀಂ ಕೋರ್ಟ್‌ ಅಡ್ವೋಕೇಟ್ಸ್‌ ಆನ್‌ ರೆಕಾರ್ಡ್‌ ಅಸೋಸಿಯೇಷನ್‌ ವರ್ಸಸ್‌ ಯೂನಿಯನ್‌ ಆಫ್‌ ಇಂಡಿಯಾ(ಇದು ಎರಡನೇ ಜಜ್‌ ಕೇಸ್‌)

- ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆ 'ಸಮಾಲೋಚನೆ' ನಿರ್ಧಾರ ಬಗ್ಗೆ ವಿವಾದ ಉಂಟಾಗಿತ್ತು. 1998ರಲ್ಲಿ ಈ ಬಗ್ಗೆ ಸುಪ್ರೀಂ ಕೋರ್ಟ್‌ ಸ್ಪಷ್ಟ ಮಾರ್ಗದರ್ಶಿ ಸೂತ್ರವನ್ನು ನೀಡಿತ್ತು. ಅದರನ್ವಯ ಸುಪ್ರೀಂ ಕೋರ್ಟ್‌ ನೇಮಕಕ್ಕೆ ಸಂಬಂಧಪಟ್ಟಂತೆ ಸಿಜೆಐ ಹಾಗೂ ನಾಲ್ವರು ಅತ್ಯಂತ ಹಿರಿಯ ನ್ಯಾಯಮೂರ್ತಿಗಳು ಹಾಗೂ ಹೈಕೋರ್ಟ್‌ ನೇಮಕಕ್ಕೆ ಸಂಬಂಧಿಸಿ ಇಬ್ಬರ ನ್ಯಾಯಮೂರ್ತಿಗಳ ಜತೆಗೆ 'ಸಮಾಲೋಚನೆ' ಮಾಡಬೇಕು. ಒಂದು ವೇಳೆ, ಇಷ್ಟು ಜನರ ಪೈಕಿ ಇಬ್ಬರು ನ್ಯಾಯಮೂರ್ತಿಗಳು ಭಿನ್ನಾಭಿಪ್ರಾಯ ತಳೆದರೆ, ಸಿಜೆಐ ತಮ್ಮ ಶಿಫಾರಸನ್ನು ಸರಕಾರಕ್ಕೆ ಸಲ್ಲಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಸೂಚಿಸಿದ ಮಾರ್ಗದರ್ಶಿ ಸೂತ್ರದಲ್ಲಿ ತಿಳಿಸಲಾಗಿದೆ.



•► ಯಾಕೆ ಟೀಕೆ?

- ಕೊಲಿಜಿಯಮ್‌ನಲ್ಲಿ ಪಾರದರ್ಶಕತೆ ಕೊರತೆ

- ಉತ್ತರದಾಯಿತ್ವ ಇಲ್ಲದಿರುವುದು

ಹೊಸ ವ್ಯವಸ್ಥೆಯ ತುಡಿತ

- ಜಸ್ಟಿಸ್‌ ಎಂ.ಎನ್‌.ವೆಂಕಟಾಚಲಯ್ಯ ಕಮಿಷನ್‌: ಈ ಹಿಂದಿನ ಎನ್‌ಡಿಎ ಸರಕಾರ ಈ ಆಯೋಗವನ್ನು ನೇಮಕ ಮಾಡಿತ್ತು. ಕೊಲಿಜಿಯಮ್‌ ವ್ಯವಸ್ಥೆಗೆ ಬದಲಿಯಾಗಿ 'ನ್ಯಾಷನಲ್‌ ಜುಡಿಷಿಯಲ್‌ ಅಪಾಯಿಂಟ್‌ಮೆಂಟ್ಸ್‌ ಕಮಿಷನ್‌(ಎನ್‌ಜೆಎಸಿ)' ರಚನೆ ಬಗ್ಗೆ ಆಯೋಗ ಒಲವು ತೋರಿತ್ತು. ಈ ಆಯೋಗಕ್ಕೆ ಸಿಜೆಐ, ಇಬ್ಬರು ಅತ್ಯಂತ ಹಿರಿಯ ನ್ಯಾಯಮೂರ್ತಿಗಳು, ಕಾನೂನು ಸಚಿವರು ಹಾಗೂ ಸಿಜೆಐ ಜತೆ ಸಮಾಲೋಚಿಸಿ ರಾಷ್ಟ್ರಪತಿಯಿಂದ ನೇಮಕಗೊಳ್ಳುವ ಸಾರ್ವಜನಿಕ ವಲಯದ ಗಣ್ಯ ವ್ಯಕ್ತಿ ಸದಸ್ಯರಾಗಬೇಕು ಎಂದು ಅದು ಶಿಫಾರಸು ಮಾಡಿತ್ತು.

- 2015ರ ಮೇನಲ್ಲಿ ಎನ್‌ಜೆಎಸಿ ರಚನೆ ಅಸಾಂವಿಧಾನಿಕ ಎಂದು ಐವರು ನ್ಯಾಯಮೂರ್ತಿಗಳಿದ್ದ ಸಾಂವಿಧಾನಿಕ ಪೀಠ ಹೇಳಿತು.

- ಆದರೆ, ಆಸಕ್ತಿಕರ ವಿಷಯ ಎಂದರೆ, 'ನ್ಯಾಯಮೂರ್ತಿಗಳೇ ನ್ಯಾಯಮೂರ್ತಿಗಳನ್ನು ನೇಮಕ' ಮಾಡುವ ಕೊಲಿಜಿಯಂ ವ್ಯವಸ್ಥೆಯಲ್ಲಿ ಎಲ್ಲವೂ ಸರಿ ಇಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತ್ತು. ನ್ಯಾಯಾಂಗ ನೇಮಕಗಳನ್ನು ಮಾಡುವ 21 ವರ್ಷದ ಈ ವ್ಯವಸ್ಥೆಯನ್ನು ಸುಧಾರಿಸಬೇಕಾದ ಅಗತ್ಯವಿದೆ ಎಂದೂ ಹೇಳಿತ್ತು.

Sunday, 21 January 2018

☀️ ಐಎಎಸ್ / ಕೆಎಎಸ್ ಪ್ರಿಲಿಮ್ಸ್ ಮಾದರಿ ಪ್ರಶ್ನೆ ಪತ್ರಿಕೆ :1 ( 5-10 ಪುಟಗಳು) (IAS / KAS Prelims Model Question Paper -I (5 to 10 pages)

☀️ ಐಎಎಸ್ / ಕೆಎಎಸ್ ಪ್ರಿಲಿಮ್ಸ್ ಮಾದರಿ ಪ್ರಶ್ನೆ ಪತ್ರಿಕೆ :1 ( 5-10 ಪುಟಗಳು)
(IAS / KAS Prelims Model Question Paper -I (5 to 10 pages)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಐಎಎಸ್ / ಕೆಎಎಸ್ ಪ್ರಿಲಿಮ್ಸ್ ಮಾದರಿ ಪ್ರಶ್ನೆ ಪತ್ರಿಕೆ
(IAS / KAS Prelims Model Question Paper)


...ಮುಂದುವರೆದ ಭಾಗ.
 ಐಎಎಸ್ / ಕೆಎಎಸ್ ಪ್ರಿಲಿಮ್ಸ್ ಎಕ್ಸಾಂ ಗೆ ಸಂಬಂಧಿಸಿದಂತೆ ನಾನು ಮಾದರಿ ಪ್ರಶ್ನೆ ಪತ್ರಿಕೆಯನ್ನು ತಯಾರಿಸುತ್ತಿದ್ದು ಈಗ 1 ರಿಂದ 33 ಪ್ರಶ್ನೆಗಳನ್ನು ಇಲ್ಲಿ ಷೇರ್ ಮಾಡುವೆ. ಈಗ ಹಾಕಿರೋ ಮಾದರಿಯೊಂದಿಗೆ ಉಳಿದವುಗಳನ್ನು ತಯಾರಿಸುತ್ತಿರುವೆ. ಸಧ್ಯದಲ್ಲಿ ಪೂರ್ಣಗೊಳಿಸುವೆ.

ಇಲ್ಲಿ ಹಂಚಿಕೊಂಡಿರುವ ಮಾದರಿ ಪ್ರಶ್ನೆಗಳು ಹಲವಾರು ನಿಖರ, ನಂಬಲರ್ಹವಾದ, ನೈಜ್ಯ ಮಾಹಿತಿಗಳನ್ನೊಳಗೊಂಡ ಹಲವು ಮೂಲಗಳಿಂದ ಕಲೆಹಾಕಿರುವಂತಹವು. ಏನಾದರೂ ಬರಹದಲ್ಲಿ ತಪ್ಪುಗಳಿದ್ದಲ್ಲಿ ಕ್ಷಮಿಸಿ ಹಾಗೂ ನನ್ನ ಗಮನಕ್ಕೆ ತನ್ನಿ.
Gmail : yaseen7ash@gmail.com





Friday, 12 January 2018

☀️ Updated*** ಐಎಎಸ್ / ಕೆಎಎಸ್ ಪ್ರಿಲಿಮ್ಸ್ ಮಾದರಿ ಪ್ರಶ್ನೆ ಪತ್ರಿಕೆ :1 ( 1-5 ಪುಟಗಳು) (IAS / KAS Prelims Model Question Paper -I (1 to 5 pages) ━━━━━━━━━━━━━━━━━━━━━━━━━━━━━━━━━━━━━━━━━━━━━ ★ ಐಎಎಸ್ / ಕೆಎಎಸ್ ಪ್ರಿಲಿಮ್ಸ್ ಮಾದರಿ ಪ್ರಶ್ನೆ ಪತ್ರಿಕೆ (IAS / KAS Prelims Model Question Paper)


☀️ Updated*** ಐಎಎಸ್ / ಕೆಎಎಸ್ ಪ್ರಿಲಿಮ್ಸ್ ಮಾದರಿ ಪ್ರಶ್ನೆ ಪತ್ರಿಕೆ :1 ( 1-5 ಪುಟಗಳು)
(IAS / KAS Prelims Model Question Paper -I (1 to 5 pages)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಐಎಎಸ್ / ಕೆಎಎಸ್ ಪ್ರಿಲಿಮ್ಸ್ ಮಾದರಿ ಪ್ರಶ್ನೆ ಪತ್ರಿಕೆ
(IAS / KAS Prelims Model Question Paper)

 ಐಎಎಸ್ / ಕೆಎಎಸ್ ಪ್ರಿಲಿಮ್ಸ್ ಎಕ್ಸಾಂ ಗೆ ಸಂಬಂಧಿಸಿದಂತೆ ನಾನು ಮಾದರಿ ಪ್ರಶ್ನೆ ಪತ್ರಿಕೆಯನ್ನು ತಯಾರಿಸುತ್ತಿದ್ದು ಈಗ 1 ರಿಂದ 33 ಪ್ರಶ್ನೆಗಳನ್ನು ಇಲ್ಲಿ ಷೇರ್ ಮಾಡುವೆ. ಈಗ ಹಾಕಿರೋ ಮಾದರಿಯೊಂದಿಗೆ ಉಳಿದವುಗಳನ್ನು ತಯಾರಿಸುತ್ತಿರುವೆ. ಸಧ್ಯದಲ್ಲಿ ಪೂರ್ಣಗೊಳಿಸುವೆ.

ಇಲ್ಲಿ ಹಂಚಿಕೊಂಡಿರುವ ಮಾದರಿ ಪ್ರಶ್ನೆಗಳು ಹಲವಾರು ನಿಖರ, ನಂಬಲರ್ಹವಾದ, ನೈಜ್ಯ ಮಾಹಿತಿಗಳನ್ನೊಳಗೊಂಡ ಹಲವು ಮೂಲಗಳಿಂದ ಕಲೆಹಾಕಿರುವಂತಹವು. ಏನಾದರೂ ಬರಹದಲ್ಲಿ ತಪ್ಪುಗಳಿದ್ದಲ್ಲಿ ಕ್ಷಮಿಸಿ ಹಾಗೂ ನನ್ನ ಗಮನಕ್ಕೆ ತನ್ನಿ.
Gmail : yaseen7ash@gmail.com