"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday 27 September 2017

ಕೆಎಎಸ್ ಮುಖ್ಯ ಪರೀಕ್ಷೆ ತಯಾರಿಗಾಗಿ ಮಾದರಿ ಪ್ರಶ್ನೆಗಳು: (ಸಾಮಾನ್ಯ ಅಧ್ಯಯನ : II ಸಂವಿಧಾನ) Part-1. (KAS Mains Exam Module Questions for General Studies)

☀️ ಕೆಎಎಸ್ ಮುಖ್ಯ ಪರೀಕ್ಷೆ ತಯಾರಿಗಾಗಿ ಮಾದರಿ ಪ್ರಶ್ನೆಗಳು:  (ಸಾಮಾನ್ಯ ಅಧ್ಯಯನ : II ಸಂವಿಧಾನ) Part-1.
(KAS Mains Exam Module Questions for General Studies)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ಮುಖ್ಯ ಪರೀಕ್ಷಾ ಮಾದರಿ  ಪ್ರಶ್ನೆಗಳು
(kas Mains Exam Module Questions)

 ★ ಸಾಮಾನ್ಯ ಅಧ್ಯಯನ : ಪತ್ರಿಕೆ II (ಸಂವಿಧಾನ)
(General Studies :Paper II (Indian Constitution))


 ಗೆಳೆಯರೇ... ಮುಂಬರುವ ಕೆಎಎಸ್ ಮುಖ್ಯ ಪರೀಕ್ಷೆಯನ್ನು ಗಮನದಲ್ಲಿಟ್ಟುಕೊಂಡು ನನ್ನ ಜ್ಞಾನದ ಪರಿಮಿತಿಯಲ್ಲಿ ಮುಖ್ಯ ಪರೀಕ್ಷೆಗಾಗಿ ಕೆಲವು ಮಾದರಿ ಪ್ರಶ್ನೆಗಳನ್ನು ತಯಾರಿಸಿ ನಿಮ್ಮ ಸ್ಪರ್ಧಾಲೋಕದಲ್ಲಿ ಮುಂದಿಟ್ಟಿರುವೆನು. ಇವು ಸಾಧ್ಯವಾದಷ್ಟು ನಂಬಲರ್ಹವಾದ ಮೂಲಗಳಿಂದ ಕಲೆಹಾಕಿರುವಂಥವು. ಇವೇ ಕೊನೆಯಲ್ಲ. ಏನಾದರೂ ತಪ್ಪು-ತಡೆಗಳಿದ್ದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತರಬೇಕೆಂದು ವಿನಂತಿ.
(G-Mail : yaseen7ash@gmail.com)



1. "ಲೋಕಸ್ ಸ್ಟಾಂಡಿ ತತ್ವ" ಎಂದರೇನು? ಭಾರತದ ನ್ಯಾಯಾಂಗ ವ್ಯವಸ್ಥೆಯ ಕ್ರಿಯಾಶೀಲತೆಯ ವ್ಯಾಪ್ತಿಯನ್ನು ನಿರ್ಧರಿಸುವಲ್ಲಿ ಇದರ ಪಾತ್ರವೇನು?
(250 ಶಬ್ದಗಳಲ್ಲಿ)


2. ಅಮೇರಿಕ ಸಂಯುಕ್ತ ಸಂಸ್ಥಾನದ ನ್ಯಾಯಾಲಯಗಳಿಗೆ ಇರುವಷ್ಟು 'ನ್ಯಾಯಿಕ ವಿಮರ್ಶೆ'ಯ ವ್ಯಾಪ್ತಿಯನ್ನು ಭಾರತದ ಸಂವಿಧಾನವು ನಮ್ಮ ನ್ಯಾಯಾಲಯಗಳಿಗೆ ನೀಡಿಲ್ಲ ಎಂಬ ಅಭಿಪ್ರಾಯವನ್ನು ನೀವು ಒಪ್ಪುವಿರಾ? ಭಾರತದಲ್ಲಿ ಪ್ರಸ್ತುತ ನ್ಯಾಯಿಕ ವಿಮರ್ಶೆಯ ಕ್ರಿಯಾಶೀಲತೆಯ ವ್ಯಾಪ್ತಿಯೊಂದಿಗೆ ಚರ್ಚಿಸಿ.
(250 ಶಬ್ದಗಳಲ್ಲಿ)


3. ಸಂವಿಧಾನಾತ್ಮಕವಾದ 'ರಾಜ್ಯಪಾಲರ ಹುದ್ದೆ'ಯು ಇಂದಿಗೂ ಹಲವು ವಿವಾದಗಳ ಗೂಡಾಗಿದ್ದು, ಈ ಎಲ್ಲಾ ವಿವಾದಗಳಿಂದ ಮುಕ್ತಗೊಳಿಸಿ ಅದರ ಘನತೆಯನ್ನು ಎತ್ತಿ ಹಿಡಿಯುವುದಕ್ಕಾಗಿ ಕೇಂದ್ರ ಸರ್ಕಾರವು ರಾಜ್ಯಪಾಲರ ನೇಮಕಾತಿಗೆ ಸಂಬಂಧಿಸಿದ ಸರ್ಕಾರಿಯಾ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವುದು ಇಂದಿನ ಅಗತ್ಯವಾಗಿದೆ ಎನ್ನಬಹುದೇ? ರಾಜ್ಯಪಾಲರ ನೇಮಕಾತಿಗೆ ಸಂಬಂಧಿಸಿದ ಸರ್ಕಾರಿಯಾ ಆಯೋಗದ ಶಿಫಾರಸ್ಸುಗಳೊಂದಿಗೆ ವಿಮರ್ಶಿಸಿ.  
(250 ಶಬ್ದಗಳಲ್ಲಿ)


4. 'ಭಾರತದ ಸಂವಿಧಾನವು ಮೂಲಭೂತ ಹಕ್ಕುಗಳು ಮತ್ತು ರಾಜ್ಯನಿರ್ದೇಶಕ ತತ್ವಗಳ ನಡುವಣ ಸಮತೋಲನದ ಮೇಲೆ ನಿಂತಿದೆ'.. ಎಂಬ ಅಭಿಪ್ರಾಯವನ್ನು ಮಿನರ್ವ್ ಮಿಲ್ಸ್ ಪ್ರಕರಣದ ಉದಾಹರಣೆಯೊಂದಿಗೆ ವಿಶದಪಡಿಸಿ.
(250 ಶಬ್ದಗಳಲ್ಲಿ)


5. ಸಂವಿಧಾನದ ತಿದ್ದುಪಡಿಗಳು ನ್ಯಾಯಿಕ ವಿಮರ್ಶೆಗೊಳಪಟ್ಟಿವೆಯೇ? ಸ್ಪಷ್ಟೀಕರಿಸಿ.
(250 ಶಬ್ದಗಳಲ್ಲಿ)


6. ಕೆಲವು ರಾಜಕೀಯ ತಜ್ಞರು ರಾಷ್ಟ್ರಾಧ್ಯಕ್ಷರನ್ನು 'ರಬ್ಬರ್ ಸ್ಟಾಂಪ್' ಗೆ ಹೋಲಿಸಿದ್ದಾರೆ. ಈ ಹೋಲಿಕೆ ಸಮಂಜಸವಾದುದದೇ? ರಾಷ್ಟ್ರಾಧ್ಯಕ್ಷರ ವಿಶೇಷ ಅಧಿಕಾರಗಳೊಂದಿಗೆ ಚರ್ಚಿಸಿ.
(250 ಶಬ್ದಗಳಲ್ಲಿ)


7. ರಾಜ್ಯಪಾಲರು ಮತ್ತು ಮುಖ್ಯಮಂತ್ರಿಯ ನಡುವಣ ಸಂವಿಧಾನಿಕ ಸಂಬಂಧದ ಕುರಿತು ಚರ್ಚಿಸಿ.
To be Continued...



No comments:

Post a Comment