"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday 21 June 2017

☀ ಬೇನಾಮಿ ಆಸ್ತಿಯೆಂದರೇನು? ಅದರ ಲಕ್ಷಣಗಳೇನು? ಹಾಗೂ ಯಾವುದು ಬೇನಾಮಿ ಆಸ್ತಿಯಾಗುವುದಿಲ್ಲ? What is a Benami (Innominate) Property? What are its features? And what are not to be considered as Benami (Innominate) Property?

☀ ಬೇನಾಮಿ ಆಸ್ತಿಯೆಂದರೇನು? ಅದರ ಲಕ್ಷಣಗಳೇನು? ಹಾಗೂ ಯಾವುದು ಬೇನಾಮಿ ಆಸ್ತಿಯಾಗುವುದಿಲ್ಲ?
What is a Benami (Innominate) Property? What are its features? And what are not to be considered as Benami (Innominate) Property?
━━━━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ಅಧ್ಯಯನ
(General Studies)


■. ಬೇನಾಮಿ ಆಸ್ತಿಯೆಂದರೆ ಮತ್ತೊಬ್ಬರ ಹೆಸರಿನಲ್ಲಿ ಕೊಳ್ಳಲಾದ ಆಸ್ತಿ. ಅಂದರೆ, ಆಸ್ತಿಯನ್ನು ಕೊಂಡಿರುವುದು ಒಬ್ಬ, ಆದರೆ ಹೆಸರು ನಮೂದಾಗಿರುವುದು ಮತ್ತೊಬ್ಬರದು.

ಆ ಆಸ್ತಿ ಸ್ಥಿರಾಸ್ತಿಯಾಗಿರಬಹುದು, ಬ್ಯಾಂಕ್ ನಲ್ಲಿ ಇಟ್ಟಿರುವ ಫಿಕ್ಸಡ್ ಠೇವಣಿಯೂ ಆಗಿರಬಹುದು. ತಮ್ಮ ಹೆಸರು ಬೆಳಕಿಗೆ ಬರಬಾರದೆಂದು ಇಚ್ಛಿಸುವವರು ಬೇರೆಯವರ ಹೆಸರಿನಲ್ಲಿ ಆಸ್ತಿ ಕೊಂಡಿರುತ್ತಾರೆ.


ಬೇನಾಮಿ ಆಸ್ತಿ ಕೊಂಡು ಸಿಕ್ಕಿಬಿದ್ದವರನ್ನು 1 ವರ್ಷದಿಂದ 7 ವರ್ಷಗಳ ವರೆಗೆ ಜೈಲಿಗಟ್ಟಬಹುದು. ಆಸ್ತಿಯ ಈಗಿನ ಬೆಲೆಯ ಶೇ.25ರಷ್ಟು ದಂಡವನ್ನೂ ಕಟ್ಟಿಸಿಕೊಳ್ಳಬಹುದು.

ನಕಲಿ ಮಾಹಿತಿ ಅಥವಾ ದಾಖಲೆ ನೀಡುವವರನ್ನು 6 ತಿಂಗಳಿನಿಂದ 5 ವರ್ಷದವರೆಗೆ ಜೈಲಿಗೆ ಕಳಿಸುವ ಅವಕಾಶ ಈ ಕಾಯ್ದೆಯಲ್ಲಿದೆ. ಅವರಿಗೆ ಆಸ್ತಿಯ ಮೌಲ್ಯದ ಶೇ.10ರಷ್ಟು ದಂಡವನ್ನೂ ವಿಧಿಸುವ ಸಾಧ್ಯತೆ ಇರುತ್ತದೆ.


■. ಬೇನಾಮಿ ಆಸ್ತಿ ಲಕ್ಷಣಗಳು.

ಮಕ್ಕಳು ಅಥವಾ ಗಂಡ/ಹೆಂಡತಿ ಹೆಸರಲ್ಲಿ ಆಸ್ತಿ ಹೊಂದಿದ್ದು, ಅದಕ್ಕಾಗಿ ಘೋಷಿತ ಆದಾಯ ಮೂಲಗಳಿಂದ ಹೊರತಾದ ಹಣ ಅಥವಾ ಇತರ ಗುಪ್ತ ಆದಾಯದಿಂದ ಖರೀದಿಸಿದ್ದರೆ

*ಸಹೋದರ, ಸಹೋದರಿ ಅಥವಾ ಸಂಬಂಧಿಗಳೊಂದಿಗೆ ಜಂಟಿ ಖಾತೆಯಲ್ಲಿ ಆಸ್ತಿ ಹೊಂದಿ ದ್ದರೆ, ಅದನ್ನು ನಿರ್ದಿಷ್ಟ ಆದಾಯೇತರ ಮೂಲಗಳಿಂದ ಖರೀದಿಸಿದ್ದರೆ,

*ನಿರ್ದಿಷ್ಟ ವ್ಯಕ್ತಿಯೊಬ್ಬ ತನಗೆ ನಂಬಿಕೆ ಇರುವ ಮೂರನೇ ವ್ಯಕ್ತಿಯ ಹೆಸರಲ್ಲಿ ಆಸ್ತಿ ಹೊಂದಿ ದ್ದರೆ ಅದು ಬೇನಾಮಿ ಆಸ್ತಿ.

*ಕಾನೂನಿನ ಪ್ರಕಾರ, ನಿರ್ದಿಷ್ಟ ಆದಾಯೇತರ ಮೂಲಗಳಿಂದ ಆಸ್ತಿ ಖರೀದಿಸಿ, ತಂದೆ-ತಾಯಿ ಹೆಸರಲ್ಲಿ ಇಟ್ಟುಕೊಂಡಿದ್ದರೂ ಅದು ಬೇನಾಮಿ ಆಸ್ತಿ ಎಂದೇ ಪರಿಗಣಿತವಾಗುತ್ತದೆ.


■. ಯಾವುದು ಬೇನಾಮಿ ಆಸ್ತಿ ಅಲ್ಲ

*ಹೆಂಡತಿ, ಮಕ್ಕಳ ಹೆಸರಲ್ಲಿ ಆಸ್ತಿ ಹೊಂದಿರುವುದು ಮತ್ತು ಅದನ್ನು ಘೋಷಿತ ಆದಾಯ ದಿಂದಲೇ ಖರೀದಿಸಿರುವುದು.

* ಸಹೋದರ, ಸಹೋದರಿ, ಸಂಬಂಧಿಗಳೊಂದಿಗೆ ಜಂಟಿ ಖಾತೆಯ ಆಸ್ತಿ ಹೊಂದಿರುವುದು ಮತ್ತು ಅದನ್ನು ಘೋಷಿತ ಆದಾಯದಿಂದ ಖರೀದಿಸಿರುವುದು.

*ನಂಬಿಕೆಯುಳ್ಳ ವ್ಯಕ್ತಿ ಹೆಸರಲ್ಲಿ ಆಸ್ತಿ ಇದ್ದರೂ, ಅದರ ಖರೀದಿ ಪ್ರಕ್ರಿಯೆಯ ವೇಳೆ ಆತನನ್ನೂ ಭಾದ್ಯಸ್ಥನನ್ನಾಗಿ ಮಾಡಿಕೊಂಡಿದ್ದರೆ, ಅದು ಬೇನಾಮಿ ಆಸ್ತಿ ಅಲ್ಲ.


ಬೇನಾಮಿ ಆಸ್ತಿಗಳ ವಿರುದ್ಧ ಇತ್ತೀಚೆಗೆ ತಿದ್ದಪಡಿ ಮಾಡಿದ ಬೇನಾಮಿ ವ್ಯವಹಾರ ನಿಯಂತ್ರಣ ಕಾಯ್ದೆ (PBPT) 2016 ನ.1ರಿಂದ ಜಾರಿಗೆ ಬಂದಿದೆ

No comments:

Post a Comment