"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday 4 March 2017

☀.ಕೆಎಎಸ್ ಮುಖ್ಯ ಪರೀಕ್ಷೆಯ ಸಂಪೂರ್ಣ ಪಠ್ಯಕ್ರಮ : ಪತ್ರಿಕೆ-3: ಸಾಮಾನ್ಯ ಅಧ್ಯಯನಗಳು-2 (PART -VIII) ( KAS Mains General Studies Paper III Syllabus)

☀.ಕೆಎಎಸ್ ಮುಖ್ಯ ಪರೀಕ್ಷೆಯ ಸಂಪೂರ್ಣ ಪಠ್ಯಕ್ರಮ :  ಪತ್ರಿಕೆ-3: ಸಾಮಾನ್ಯ ಅಧ್ಯಯನಗಳು-2 (PART -VIII)
( KAS Mains General Studies  Paper III  Syllabus)
•─━━━━━═══════════━━━━━─••─━━━━━═══════════━━━━━─•

★ ಕೆಎಎಸ್ ಪರಿಕ್ಷೆಯ ಪಠ್ಯಕ್ರಮ
(KAS Exam Syllabus)

★ ಕೆಎಎಸ್ ಸಾಮಾನ್ಯ ಅಧ್ಯಯನ ಪತ್ರಿಕೆ 3
(KAS General Studies Paper III)

... ಮುಂದುವರೆದ ಭಾಗ.



●. ಪತ್ರಿಕೆ-3.    ಸಾಮಾನ್ಯ ಅಧ್ಯಯನಗಳು-2


●. ವಿಭಾಗ-1

ಭೌತಿಕ ಲಕ್ಷಣಗಳು ಮತ್ತು ಸ್ವಾಭಾವಿಕ ಸಂಪನ್ಮೂಲಗಳು

ವಿಶ್ವ ಭೂಗೋಳಶಾಸ್ತ್ರ

1. ಭೂ ಮಂಡಲ -
ಸೌರಮಂಡಲದಲ್ಲಿ ಭೂಮಿಯ ಸ್ಥಾನ, ಬಂಡೆಗಳು, ಭೂಕಂಪಗಳು, ಜ್ವಾಲಮುಖಿಗಳು, ಶಿಲಾ ಘಲಕಗಳ ಸಂಚಲನ, ಸವೆತ, ಕಾರಕಗಳು. ವಾಯುಮಂಡಲ - ರಚನೆ ಮತ್ತು ಸಂಯೋಜನೆ - ಹವಾಮಾನ ಮತ್ತು ವಾಯುಗುಣದ ಅಂಶಗಳು – ವ್ಯಾಪಕವಾದ ಹವಾಮಾನದ ವಿಧಗಳು. ಜಲಮಂಡಲ - ವಿಶ್ವ ಸಾಗರಗಳ ಲವಣಾಂಶ - ಸಾಗರ ಪ್ರವಾಹಗಳು ಮತ್ತು ಅಲೆಗಳು - ಸಾಗರ ನಿಕ್ಷೇಪಗಳು.

2. ಭೂ ಖಂಡಗಳ ಪ್ರಕೃತಿ ಗೋಚರ ವಿಷಯಗಳು ಮತ್ತು ಜನಸಾಂದ್ರತೆ ವಿವರಣೆ:
— ಪರ್ವತಗಳು, ನದಿಗಳು, ಅರಣ್ಯಗಳು, ಹುಲ್ಲುಗಾವಲು ಭೂಮಿಗಳು, ಮರುಭೂಮಿಗಳು, ಮಾನವ ಜನಾಂಗಗಳು, ಜನಸಂಖ್ಯೆಯ ಬದಲಾವಣೆ, ವಿತರಣೆ ಮತ್ತು ಜನಸಂಖ್ಯಾ ಪರಿವರ್ತನೆ, ಸಾಂದ್ರತೆ, ಲಿಂಗಾನುಪಾತ, ಜೀವನದ ಗುಣಮಟ್ಟ, ಜೀವಮಾನ ನಿರೀಕ್ಷೆ, ಸಾಕ್ಷರತೆ, ಜೀವನದ ಗುಣಮಟ್ಟ ಮತ್ತು ವಲಸೆ.

ಭಾರತ ಭೂಗೋಳಶಾಸ್ತ್ರ

3. ಭಾರತದ ಭೌಗೋಳಿಕತೆ:
ಹವಾಗುಣ, ನದಿಗಳು, ಮಣ್ಣು, ನೈಸರ್ಗಿಕ ಸಸ್ಯಗಳು,ಖನಿಜ ಸಂಪನ್ಮೂಲಗಳು: ಕಬ್ಬಿಣದ ಅದಿರು ಮತ್ತು ಮ್ಯಾಂಗನೀಸ್ – ತಾಮ್ರ ಮತ್ತು ಬಾಕ್ಸೈಟ್, ಕಲ್ಲಿದ್ದಲು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ. ಪರಮಾಣು ನಿಕ್ಷೇಪಗಳು, ಮುಖ್ಯ ಬೆಳೆಗಳು: ಧನ್ಯಗಳು, ಸಣ್ಣ ಕಾಳುಗಳು, ಎಣ್ಣೆ ಬೀಜಗಳು, ತೋಟದ ಬೆಳೆಗಳು, ವಾಣಿಜ್ಯ ಬೆಳೆಗಳ ಹಂಚಿಕೆ ಮತ್ತು ಉತ್ಪಾದನೆ, ಭಾರತೀಯ ಜನಸಂಖ್ಯಾಶಾಸ್ತ್ರ - ಬೆಳವಣಿಗೆ, ರಚನೆ, ಹಂಚಿಕೆ, ಸಾಂದ್ರತೆ, ಮಾನವ ಅಭಿವೃದ್ಧಿ ಸೂಚ್ಯಂಕ ಜನಸಂಖ್ಯಾ ಶಾಸ್ತ್ರದ ದತ್ತಾಂಶ.


4. ಕೈಗಾರಿಕಾ ಯೋಜನೆ ಮತ್ತು ಅಭಿವೃದ್ಧಿ:
ಭಾರೀ, ಮಧ್ಯಮ, ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳ ಬೆಲವಣಿಗೆ ಮತ್ತು ಹಂಚಿಕೆ - ಭಾರತದ ಕೈಗಾರಿಕಾ ಪ್ರದೇಶಗಳು, ಕೈಗಾರಿಕಾ ಮೂಲ ಸೌಕರ್ಯ – ರೈಲ್ವೆಗಳು, ರಸ್ತೆಗಳು ಮತ್ತು ಬಂದರುಗಳು, ಹಿಂದುಳಿದ ಪ್ರದೇಶಗಳು ಮತ್ತು ಗ್ರಾಮೀಣ ಕೈಗಾರೀಕೀಕರಣ ಪ್ರಾದೇಶಿಕ ಯೋಜನೆ ಮತ್ತು ಅಭಿವೃದ್ಧಿ ಬುಡಕಟ್ಟು ಮತ್ತು ಗುಡ್ಡಗಾಡು ಪ್ರದೇಶಗಳ, ಬರಪೀಡಿತ ಪ್ರದೇಶಗಳು, ಅಚ್ಚುಕಟ್ಟು ಪ್ರದೇಶಗಳು ಮತ್ತು ಜಲಾಯನ ಪ್ರದೇಶಗಳು, ಪಟ್ಟಣಗಳು ಮತ್ತು ನಗರಗಳ ವರ್ಗೀಕರಣ, ನಗರ ವಿನ್ಯಾಸ.


5. ಭೌಗೋಳಿಕ ವಿಭಾಗಗಳು:
ಹವಾಮಾನ, ನದಿಗಳು ಮಳೆ ಹಂಚಿಕೆ, ನೈಸರ್ಗಿಕ ಸಸ್ಯವರ್ಗ ಮತ್ತು ಮಣ್ಣು, ಕೃಷಿ ಮತ್ತು ಕೃಷಿ ಹವಾಮಾನ ಪ್ರದೇಶಗಳು, ಮುಖ್ಯ ಬೆಳೆಗಳು, ಕರ್ನಾಟಕದ ತೋಟ ಮತ್ತು ವಾಣಿಜ್ಯ ಬೆಳೆಗಳು, ಕರ್ನಾಟಕದ ಖನಿಜ ಸಂಪನ್ಮೂಲಗಳು, ವಿದ್ಯುತ್ ಮೂಲಗಳು (ಜಲ, ಸೌರ, ಪರಮಾಣು ಮತ್ತು ಗಾಳಿ) ಭಾರಿ, ಮಧ್ಯಮ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳು, ಆಗ್ರೋ ಆಧಾರಿತ ಕೈಗಾರಿಕೆಗಳು, ಕರ್ನಾಟಕದ ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆಗಳು, ಭೌಗೋಳಿಕ ಮಾಹಿತಿ ವ್ಯವಸ್ಥೆ.


6. ನಗರ ಭೂಬಳಕೆ ನೀತಿ ಮತ್ತು ನಗರೀಕರಣ:
ಜನಸಂಖ್ಯಾ ವೈಶಿಷ್ಟ್ಯಗಳು, ಸಾಕ್ಷರತೆ ಮತ್ತು ನಗರೀಕರಣ, ಜನಸಂಖ್ಯಾ ಸಮಸ್ಯೆಗಳು ಮತ್ತು ನೀತಿಗಳು, ಸಾಕ್ಷರತೆ, ನಗರ ವರ್ಗೀಕರಣ ಮತ್ತು ನಗರ ಕ್ಷೇತ್ರಗಳ ಪ್ರಭಾವ, ಗ್ರಾಮೀಣ ನಗರ ಅಂಚಿನಲ್ಲಿರುವ ನಗರ ಬೆಳವಣಿಗೆಯ ಸಮಸ್ಯೆಗಳು, ಭೂಬಳಕೆ, ನಗರ ಯೋಜನೆ, ಕೊಳಚೆ ಮತ್ತು ನಗರ ವಸತಿ, ಆಂತರಿಕ ಮತ್ತು ಪ್ರದೇಶಿಕ ವ್ಯಾಪಾರ ಮತ್ತು ಗ್ರಾಮೀಣ ಮಾರುಕಟ್ಟೆಗಳ ಕೇಂದ್ರಗಳ ಪಾತ್ರ.

━━━━━━━━━━━━━━━━━━━━━━━━━━━━━━━━━━━━━━━━━━━━━


●. ವಿಭಾಗ-2

ಭಾರತದ ಸಂವಿಧಾನ ಅವಲೋಕನ (7 ಘಟಕಗಳು)

1. ಸಂವಿಧನದ ಸ್ವರೂಪ:
ಸಾಂವಿಧಾನಿಕ ಬೆಳವಣಿಗೆಗಳು, ಸಂವಿಧಾನದ ಪ್ರಮುಖ ಲಕ್ಷಣಗಳು: ಪೀಠಿಕೆ, ರಾಜ್ಯ ನೀತಿಯ ನಿರ್ದೇಶಕ ತತ್ವಗಳು, ಭಾರತೀಯ ಒಕ್ಕೂಟ, ಇತ್ಯಾದಿ.


2. ಮೂಲಭೂತ ಹಕ್ಕುಗಳು:
ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆ ವಿರುದ್ಧದ ಹಕ್ಕು, ಧಾರ್ಮಿಕ ಸ್ವಾತಂತ್ರ್ಯದ ಹಕ್ಕು, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು, ಸಂವಿಧಾನಾತ್ಮಕ ಪರಿಹಾರದ ಹಕ್ಕುಸೂಕ್ತ ನಿರ್ಬಂಧಗಳು - ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಮತ್ತು ಅಲ್ಪಸಂಖ್ಯಾತರಿಗೆ ಅವಕಾಶಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯಗಳ ನಿಷೇಧ ಅಧಿನಿಯಮ, ರಾಷ್ಟ್ರೀಯ ಮತ್ತು ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗ.


3. ಕಾನೂನಾತ್ಮಕ ಅಧಿಕಾರಗಳ ಹಂಚಿಕೆ:
ಕೇಂದ್ರ ಮತ್ತು ರಾಜ್ಯ ನಡುವೆ, ಕೇಂದ್ರ ಮತ್ತು ರಾಜ್ಯಗಳ ನಡುವೆ ಆಡಳಿತಾತ್ಮಕ ಮತ್ತು ಆರ್ಥಿಕ ಸಂಬಂಧಗಳು, ಸಂವಿಧಾನಿಕ ಸಂಸ್ಥೆಗಳ ಅಧಿಕಾರಗಳು ಮತ್ತು ಪ್ರಕಾರ್ಯಗಳು, ರಾಜ್ಯಪಾಲರ ಅಧಿಕಾರಗಳು ಮತ್ತು ಪ್ರಕಾರ್ಯಗಳು – ಮಂತ್ರಿ ಪರಿಷತ್ತು ಮತ್ತು ಸಚಿವ ಸಂಪುಟ, ನ್ಯಾಯಿಕ ಪರಿಹಾರೋಪಾಯಗಳು.


4. ಏಕಸದನ ಮತ್ತು ದ್ವಸದನ:
ವಿಧಾನ ಮಂಡಲ ಪ್ರಕಾರ್ಯಗಳು ಮತ್ತು ಹೊಣೆಗಾರಿಕೆಯ ಬಿಕ್ಕಟ್ಟು, ಪ್ರತ್ಯಾಯೋಜಿತ ಶಾಸನ, ಕಾನೂನಾತ್ಮಕ ಕಾರ್ಯವಿಧಾನ ಮತ್ತು ವಿಧಾನ ಮಂಡಲದ ಸಮಿತಿಗಳು, ಪ್ರತ್ಯಾಯೋಜಿತ ಶಾಸನದ ಮೇಲೆ ಕಾನೂನಾತ್ಮಕ ಮತ್ತು ನ್ಯಾಯಾಂಗದ ನಿಯಂತ್ರಣ, ಆಡಳಿತಾತ್ಮಕ ಕ್ರಮದ ನ್ಯಾಯಿಕ ವಿಮರ್ಶೆ, ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (comptroller and Auditor General of India), ಭಾರತದ ಅಟ್ಟಾರ್ನಿ ಜನರಲ್.


5. ಸಂವಿಧಾನದ ಪ್ರಮುಖ ತಿದ್ದುಪಡಿಗಳು:
ಮೂಲ ರಚನೆಯ ಸಿದ್ಧಂತ, ತುರ್ತು ಪರಿಸ್ಥಿತಿಯ ಅವಕಾಶಗಳು ಮತ್ತು ವಿಕೇಂದ್ರಿಕರಣ, ಪಂಚಾಯತ್ ರಾಜ್, ಎಪ್ಪತ್ತಮೂರನೆ ಮತ್ತು ಎಪ್ಪತ್ತನಾಲ್ಕನೇ ತಿದ್ದುಪಡಿಗಳು ಇತ್ಯಾದಿ.


6. ಭಾರತದಲ್ಲಿ ಕಲ್ಯಾಣ ಪರಿಕಲ್ಪನೆ ವ್ಯವಸ್ಥೆ:
ರಾಜ್ಯ ನೀತಿಯ ನಿರ್ದೇಶಕ ತತ್ವಗಳ ಮತ್ತು ಅವುಗಳ ಸಂಬಂಧಗಳು, ಆಸ್ತಿ ಹಕ್ಕು ಚುನಾವಣಾ ಆಯೋಗ, ಲೋಕಾ ಸೇವಾ ಆಯೋಗಗಳು, ಮಹಿಳಾ ಅಯೋಗ, ರಾಷ್ಟ್ರೀಯ ಮತ್ತು ಅಲ್ಪಸಂಖ್ಯಾತರ ಆಯೋಗ, ಹೊಂದುಳಿದ ವರ್ಗಗಳ ಆಯೋಗ, ಮಾನವ ಹಕ್ಕುಗಳ ಆಯೋಗ, ಹಣಕಾಸು ಆಯೋಗ, ಯೋಜನಾ ಆಯೋಗ, ರಾಷ್ಟ್ರೀಯ ಅಭಿವೃದ್ಧಿ ಮಂಡಳಿ.


7. ಕೇಂದ್ರ ರಾಜ್ಯದಡಿಯಲ್ಲಿನ ಸೇವೆಗಳು:
ಸರ್ಕಾರ ಮತ್ತು ಸರ್ಕಾರಿ ನೌಕರರಿಗೆ ಸಂಬಂಧಿಸಿದಂತೆ ಸಂವಿಧನಾತ್ಮಕ ಅವಕಾಶಗಳು.

━━━━━━━━━━━━━━━━━━━━━━━━━━━━━━━━━━━━━━━━━━━━━


●. ವಿಭಾಗ-3

ಸಾರ್ವಜನಿಕ ಆಡಳಿತ ಮತ್ತು ನಿರ್ವಹಣೆ – ಅಂತರಾಷ್ಟ್ರೀಯ ಸಂಬಂಧಗಳು (7 ಘಟಕಗಳು)


1. ಖಾಸಗಿ ಮತ್ತು ಸಾರ್ವಜನಿಕ ಆಡಳಿತ:
ಸಮಾಜದಲ್ಲಿ ಅದರ ಪಾತ್ರ, ಕಲೆ ಮತ್ತು ವಿಜ್ಞಾನದಲ್ಲಿ ಸಾರ್ವಜನಿಕ ಆಡಳಿತ, ಹೊಸ ಸಾರ್ವಜನಿಕ ಆಡಳಿತ ಮತ್ತು ಹೊಸ ಸಾರ್ವಜನಿಕ ನಿರ್ವಹಣೆ, ಪ್ರತಿಕ್ರಿಯಾಶೀಲ ಆಡಳಿತ, ಆಡಳಿತ ಮತ್ತು ನಿರ್ವಹಣೆ ನಡುವಿನ ವ್ಯತ್ಯಾಸ, ಸಾರ್ವಜನಿಕ ಮತ್ತು ಖಾಸಗಿ ಆಡಳಿತದ ನಡುವಿನ ವ್ಯತ್ಯಾಸ.


2. ಸಂಘಟನೆ ರಚನೆ:
ಸಿಬ್ಬಂದಿ, ಹಣಕಾಸು, ಆಡಳಿತಾತ್ಮಕ ಕಾನೂನು, ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆ, ಜನಕಲ್ಯಾಣ ಆಡಳಿತ, ಭಾರತೀಯ ಆಡಳಿತದಲ್ಲಿ ಪ್ರದೇಶಗಳ ವಿವಾದಗಳು, ಅಭಿವೃದ್ಧಿ ಆಡಳಿತ.


3. ಸಾಂಸ್ಥಿತಿಕ ವರ್ತನೆ ಮತ್ತು ನಿರ್ವಹಣೆ ಪರಿಕಲ್ಪನೆಗಳು:
ಸಾಂಸ್ಥಿಕ ರಚನೆ, ವ್ಯವಸ್ಥೆಗಳು, ಪ್ರಕ್ರಿಯೆಗಳು, ತಂತ್ರ ಕುಶಲತೆ, ಕಾರ್ಯನೀತಿಗಳು ಮತ್ತು ಉದ್ದೇಶಗಳು, ನಿರ್ಧಾರ ತೆಗೆದುಕೊಳ್ಳುವುದು, ಸಂವಹನ, ಕೇಂದ್ರೀಕರಣ, ಅಧಿಕಾರದ ಪ್ರತ್ಯಾಯೋಜನೆ, ಹೊಣೆಗಾರಿಕೆ, ನಿಯಂತ್ರಣ.


4. ಔಪಚಾರಿಕ ಮತ್ತು ಅನೌಪಚಾರಿಕ ಸಂಘಟನೆ:
ಪ್ರಕಾರ್ಯಗಳ ನಿರ್ವಹಣೆ, ಹಣಕಾಸು, ಎಚ್ಆರ್ ವ್ಯಾಪಾರೋಧ್ಯಮ, ಉತ್ಪಾದನೆ, ನಾಯಕತ್ವ ಮತ್ತು ಪ್ರೇರಣೆ.


5. ನಿರ್ವಹಣೆ ಸಾಧನಗಳು ಮತ್ತು ತಂತ್ರಗಳು:
ಅನಿಶ್ಚಿತತೆ ಉಂಟಾದಲ್ಲಿ ತೀರ್ಮಾನ ತೆಗೆದುಕೊಳ್ಳುವುದು ಪಿಇಆರ್ಟಿ ಮತ್ತು ಸಿಪಿಎಂ, ಪಿಐಎಂಇ, ಪಿಓಎಸ್ಡಿ - ಸಿಓಆರ್ಬಿ, ಎಸ್ಡಬ್ಲ್ಯೂಒಟಿ ವಿಶ್ಲೇಷಣೆಗಳು, ಗುಣಮಟ್ಟ ಮತ್ತು ಮೌಲ್ಯನಿರ್ಣಯ ಕಾರ್ಯನಿರ್ವಹಣೆ, ಪಿಡಿಸಿಎ ಆವರ್ತ, ಸಿಬ್ಬಂದಿ ಕಾರ್ಯ ನೀತಿಗಳು, ಮಾನವ ಶಕ್ತಿ ಕಾರ್ಯನೀತಿ ಮತ್ತು ಯೋಜನೆ, ತರಬೇತಿ ಮತ್ತು ಅಭಿವೃದ್ಧಿ, ಸಂಘರ್ಷ ನಿರ್ವಹಣೆ, ಬದಲಾವಣೆ ಮತ್ತು ಅಭಿವೃದ್ಧಿಯ ನಿರ್ವಹಣೆ, ತಂಡ ರಚನೆ ಗುಣಮಟ್ಟದ ಉಪಕರಣಗಳು, (ಹೊಸ ಕಲ್ಪನೆಗಳನ್ನು ಚರ್ಚಿಸುವ ವಿಧನ, ನಾಮಿನಲ್ ಗ್ರೂಪ್ ಟೆಕನಿಕ್ (Group Techniques), ಪರೆಟೋ ಚಾರ್ಟ್, ಫಿಷ ಬೊನ್ ಚಿತ್ರ (Fishbone Diagram) ಮತ್ತು ಪ್ರೊಸಸ್ ಚಾರ್ಟ್.


6. ಆಡಳಿತಾತ್ಮಕ ಸುಧಾರಣೆಗಳು:
ಸಾರ್ವಜನಿಕ ಸೇವೆಯಲ್ಲಿ ನೀತಿ ಮತ್ತು ಮೌಲ್ಯಗಳು, ಸಾರ್ವಜನಿಕ ಸಂಬಂಧಗಳು, ಉತ್ತಮ ಆಡಳಿತ, ಹೊಣೆಗಾರಿಕೆ ಮತ್ತು ನಿಯಂತ್ರಣ, ಕಾರ್ಯಕ್ರಮದ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ, ಲೋಕಪಾಲ ಮತ್ತು ಲೋಕಾಯುಕ್ತ, ನಾಗರಿಕ ಕುಂದು ಕೊರತೆಗಳ ನಿವಾರಣೆಗಳು, ಜಿಲ್ಲಾಡಳಿತ ಮತ್ತು ಪಂಚಾಯತ್ ರಾಜ್ ವ್ಯವಸ್ಥೆ, ಕಾನೂನು ಮತ್ತು ಸುವ್ಯವಸ್ಥೆ ಮತ್ತು ಅಭಿವೃದ್ಧಿ ಕಾರ್ಯಗಳು, ಅಭಿವೃದ್ಧಿ ಕಾರ್ಯಕ್ರಮಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಹಾಗೂ ಮಹಿಳೆಯ ಕಲ್ಯಾಣ ಕಾರ್ಯಕ್ರಮಗಳು, ಜನರ ಪಾಲ್ಗೋಳ್ಳುವಿಕೆ, ಆಡಳಿತಾತ್ಮಕ ಸುಧಾರಣೆಗಳ ಆಯೋಗಗಳು- ಕೇಂದ್ರ ಮತ್ತು ರಾಜ್ಯ.


7. ವಿಶ್ವಸಂಸ್ಥೆ ರಾಷ್ಟ್ರಗಳು ಮತ್ತು ವಿಶಿಷ್ಟ ಏಜೆನ್ಸಿಗಳು:
ಇತರ ಅಂತರಾಷ್ಟ್ರೀಯ ಸಂಘಟನೆಗಳು ಮತ್ತು ಏಜೆನ್ಸಿಗಳು, ಯುಎನ್ಓದ ಮೂಲ ಮತ್ತು ಅಭಿವೃದ್ಧಿ-ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಪಾತ್ರ, ಸಾಮಾನ್ಯ ಸಭೆ, ಭದ್ರತಾ ಮಂಡಳಿ, ಆರ್ಥಿಕ ಮತ್ತು ಸಾಮಾಜಿಕ ಮಂಡಳಿ, ಟ್ರಸ್ಟಿ ಶಿಫ್ ಕೌನ್ಸಿಲ್ (Trusteeship) ಅಂತರಾಷ್ಟ್ರೀಯ ನ್ಯಾಯಾಲಯ, ಯುಎನ್ ಮತ್ತು ಶಾಂತಿ ಪಾಲನಾ ನಿರ್ವಹಣೆಗಳು, ಯುಎನ್ ಮತ್ತು ನಿಶ್ಯಸ್ತ್ರೀಕರಣ, ಯುಎನ್ ಲಕ್ಷಣಗಳು, ಡಬ್ಲೂಎಚ್ಓ, ಐಎಲ್ಓ, ಎಫ್ಎಒ ಇತ್ಯಾದಿಗಳಂಥ ವಿಶೇಷ ಏಜೆನ್ಸಿಗಳು, ಐಎಮ್ಎಫ್ ನಂತ ಅಂತರಾಷ್ಟ್ರೀಯ ಸಂಸ್ಥೆಗಳು, ವಿಶ್ವಬ್ಯಾಂಕ್, ಎಡಿಬಿ, ಡಬ್ಲೂಟಿಒ, ಇಯು, ಎಎಸ್ಇಎಎನ್, ಸಾರ್ಕ್, ಎಯು, ಎನ್ಎಟಿಒ, ಎನ್ಎಎಮ್, ಓಪಿಇಸಿ, ಜಿ-8, ಐಎಇಎ ಇತ್ಯಾದಿಗಳು, ಅಂತರಾಷ್ಟ್ರೀಯ ಸಂಬಂಧಗಳಲ್ಲಿ ಅಭಿವೃದ್ಧಿ ರಾಷ್ಟ್ರಗಳ ಪಾತ್ರ, ಭಾರತ ಮತ್ತು ಅದರ ನೆರೆಹೊರೆ ರಾಷ್ಟ್ರಗಳು ಇತ್ಯಾದಿ.

...ಮುಂದುವರೆಯುವುದು.

(ಕೃಪೆ : ಯುಸಿಸಿ ಬೆಂಗಳೂರು) 

No comments:

Post a Comment