"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday 31 March 2015

☀4. ಕರ್ನಾಟಕದ ಕರಾವಳಿ ಪ್ರದೇಶ:  (Karnataka coastal region)

☀4. ಕರ್ನಾಟಕದ ಕರಾವಳಿ ಪ್ರದೇಶ:
(Karnataka coastal region)

━━━━━━━━━━━━━━━━━━━━━━━━━━━━━━━━━━━━━━━━━━━━━

♦.Unit 2.ಕರ್ನಾಟಕ ರಾಜ್ಯದ ಭೂ ಭೌತ ಲಕ್ಷಣಗಳು:.. ಮುಂದುವರೆದ ಭಾಗ...
(Karnataka state physical, geographical Features)

♦.(ಕರ್ನಾಟಕ ಪ್ರಾಕೃತಿಕ ಭೂಗೋಳ)
(Karnataka physical Geography)



✧.ಕರ್ನಾಟಕದ ಕರಾವಳಿ ಪ್ರದೇಶವು ಪೂರ್ವದಲ್ಲಿ ಕರ್ನಾಟಕ ಪ್ರಸ್ಥಭೂಮಿಯ ಪಶ್ಚಿಮಘಟ್ಟಗಳ ಅಂಚಿನ, ಪಶ್ಚಿಮದಲ್ಲಿ ಅರಬ್ಬೀ ಸಮುದ್ರದ ನಡುವೆ ಹರಡಿದೆ.

✧.ಈ ಭಾಗ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಿದೆ.

✧.ಈ ಪ್ರದೇಶದಲ್ಲಿ ಪಶ್ಚಿಮಘಟ್ಟದ ಅನೇಕ ಏಣುಗಳು ಚಾಚಿದ ಭಾಗಗಳು ಅಡ್ಡಹಾಯ್ದಂತೆ ಕಂಡುಬರುತ್ತದೆ. ಈ ಪ್ರದೇಶವೇ ಅತ್ಯಂತ ಸಂಕೀರ್ಣವಾದುದು. ಇದರ ತುಂಬ ನದಿಗಳಿವೆ, ನದಿಚಾಚುಗಳಿವೆ, ಜಲಪಾತಗಳಿವೆ, ಗಿರಿಶೃಂಗಗಳಿವೆ, ಬೆಟ್ಟಸಾಲುಗಳಿವೆ.


●.ಕರಾವಳಿ ಪ್ರದೇಶವನ್ನು ಎರಡು ಪ್ರಮುಖ ಭೂಭೌತಘಟಕಗಳಾಗಿ ವಿಭಜಿಸಬಹುದು -
✧.ಬಯಲು ಮತ್ತು
✧.ಪಶ್ಚಿಮಘಟ್ಟಗಳು.

✧.ಕರಾವಳಿ ಬಯಲು ಅಳಿವೆಯ ಇಕ್ಕಟ್ಟಾದ ವಿಸ್ತರಣೆಯನ್ನೂ ಮತ್ತು ಕಡಲ ಬಯಲನ್ನು ಪ್ರತಿನಿಧಿಸುತ್ತದೆ.

✧.ಪೂರ್ವದೆಡೆ ದಿಢೀರೆಂದು ಎದ್ದಿರುವ ಭಾಗವೇ ಪಶ್ಚಿಮ ಘಟ್ಟಗಳನ್ನು ರೂಪಿಸಿದೆ.

 ✧.ದಕ್ಷಿಣ ಭಾಗಕ್ಕೆ ಹೋಲಿಸಿದರೆ (900 ರಿಂದ 1,500 ಮೀಟರ್) ಘಟ್ಟದ ಉತ್ತರ ಭಾಗದ ಔನ್ನತ್ಯ ಕೆಳಮಟ್ಟದ್ದು ಎಂದೇ ಹೇಳಬಹುದು (450 ರಿಂದ 600 ಮೀಟರ್).

✧.ಕರಾವಳಿ ಪಟ್ಟಿಯು ಸರಾಸರಿ 50ರಿಂದ 80 ಕಿಲೋ ಮೀಟರ್ ಅಗಲವಾಗಿದೆ.

✧.ಉದ್ದ ಉತ್ತರ ದಕ್ಷಿಣವಾಗಿ ಸುಮಾರು 267 ಕಿಲೋ ಮೀಟರ್. ಕೆಲವೆಡೆ ಪಕ್ಕದ ಪಶ್ಚಿಮಘಟ್ಟಗಳ ಶೃಂಗಗಳು ಕಾರವಾರದ ಬಳಿ ಕಾಣುವಂತೆ ಹದಿಮೂರು ಕಿಲೋ ಮೀಟರುಗಳಷ್ಟು ಸನಿಹದಲ್ಲಿದೆ.

✧.ಸರಾಸರಿ ಸಮುದ್ರ ಮಟ್ಟದಿಂದ ಈ ಭಾಗದ ಸರಾಸರಿ ಎತ್ತರ 75 ಮೀಟರುಗಳಷ್ಟು.

(ಕೃಪೆ: ಕರ್ನಾಟಕ ಕೈಪಿಡಿ)

—ಮುಕ್ತಾಯ. 

No comments:

Post a Comment